ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನವು ಚೀನಾ ನೀತಿಯ ಕೈಗೊಂಬೆ: ವಾಯುಪಡೆಯ ಮುಖ್ಯಸ್ಥ

Last Updated 30 ಡಿಸೆಂಬರ್ 2020, 3:15 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನವು ಚೀನಾ ನೀತಿಯ ಕೈಗೊಂಬೆಯಾಗಿ ಮಾರ್ಪಟ್ಟಿದೆ ಎಂದು ಭಾರತೀಯ ವಾಯುಪಡೆಯ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಹೇಳಿದ್ದಾರೆ.

ಅಫ್ಗಾನಿಸ್ತಾನದಿಂದ ಅಮೆರಿಕದ ಪಡೆಗಳನ್ನು ಹಿಂಪಡೆದುಕೊಂಡಿರುವುದು ಚೀನಾಗೆ ಇಸ್ಲಾಮಾಬಾದ್ ಮೂಲಕ ಈ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಬಾಗಿಲು ತೆರೆಯಿತು ಎಂದು ವಾಯುಪಡೆ ಮುಖ್ಯಸ್ಥರು ಹೇಳಿದರು.

ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಷನ್ ಚಿಂತಕರ ಚಾವಡಿ (ಥಿಂಕ್-ಟ್ಯಾಂಕ್) ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಚೀನಾದ ಮೇಲೆ ಪಾಕಿಸ್ತಾನದ ಅವಲಂಬನೆ ಹೆಚ್ಚಾಗಲಿದ್ದು, ಚೀನಾದ ಸಾಲದ ಬಲೆಗೆ ಬೀಳಲಿದೆ ಎಂದು ಹೇಳಿದರು.

ಚೀನಾ ಹಾಗೂ ಅದರ ತಂತ್ರಗಾರಿಕೆ ಬಗ್ಗೆ ಅರಿತುಕೊಳ್ಳುವುದು ಭಾರತದ ಮುಂದಿರುವ ಪ್ರಮುಖ ಭದ್ರತಾ ಸವಾಲಾಗಿದೆ ಎಂದವರು ತಿಳಿಸಿದರು.

ಪಾಕಿಸ್ತಾನವು ಚೀನಾ ನೀತಿಯ ಕೈಗೊಂಬೆಯಾಗಿ ಮಾರ್ಪಟ್ಟಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಸಂಬಂಧಿಸಿದಂತೆ ಚೀನಾದ ಬೋನಿನಲ್ಲಿ ಸಿಲುಕಿದ್ದು, ಭವಿಷ್ಯದಲ್ಲಿ ಮತ್ತಷ್ಟು ಮಿಲಿಟರಿ ಅವಲಂಬನೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು.

ಅಫ್ಗಾನಿಸ್ತಾನದಿಂದ ಅಮೆರಿಕ ನಿರ್ಗಮಿಸಿರುವುದು ಈ ಪ್ರದೇಶದಲ್ಲಿ ಪಾಕಿಸ್ತಾನದ ಮೂಲಕ ಚೀನಾಗೆ ಹೆಚ್ಚಿನ ಆಯ್ಕೆಗಳನ್ನು ತೆರೆದಿದೆ. ಇದು ಮಧ್ಯ ಏಷ್ಯಾಕ್ಕೆ ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ. ಈ ಪ್ರದೇಶದತ್ತ ದೀರ್ಘ ಕಾಲದಿಂದ ಕಣ್ಣಿಟ್ಟಿದೆ ಎಂದು ಐಎಎಫ್ ಮುಖ್ಯಸ್ಥರು ತಿಳಿಸಿದರು.

ದುರ್ಬಲ ರಾಷ್ಟ್ರಗಳ ಮೇಲೆ ಏಕಪಕ್ಷೀಯ ನಿಲುವುಗಳನ್ನು ಹೇರಲು ಆರ್ಥಿಕ ಅವಲಂಬನೆ ಹಾಗೂ ಬಲವಂತ ಮಾಡಲಾಗುತ್ತಿದೆ. ದುರ್ಬಲ ರಾಷ್ಟ್ರಗಳನ್ನು ಮರು ಪಾವತಿಸಲಾಗದ ಸಾಲದ ಭಾದೆಗೆ ಸಿಕ್ಕಿ ಹಾಕಿಸಿಕೊಳ್ಳುವ ಮೂಲಕ ಭೌಗೋಳಿಕ ರಾಜಕೀಯ ಗುರಿಗಳನ್ನು ಸಾಧಿಸುತ್ತಾರೆ ಎಂದು ಚೀನಾವನ್ನು ಬೊಟ್ಟು ಮಾಡಿಕೊಂಡು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT