ಶನಿವಾರ, ಮೇ 28, 2022
21 °C

ಭಾರತದತ್ತ ಬರುತ್ತಿದ್ದ ಪಾಕ್ ಡ್ರೋನ್‌ಗೆ ಗುಂಡು ಹೊಡೆದು ಹಿಂದಕ್ಕಟ್ಟಿದ ಬಿಎಸ್‌ಎಫ್

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಜಮ್ಮು: ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯು ಜಮ್ಮುವಿನ ಆರ್‌.ಎಸ್‌.ಪುರ ವಲಯದ ಅಂತರರಾಷ್ಟ್ರೀಯ ಗಡಿ ಬಳಿ ಶನಿವಾರ ಪಾಕಿಸ್ತಾನದ ಡ್ರೋನ್‌ವೊಂದನ್ನು ಗುರುತಿಸಿದ್ದು, ಗುಂಡಿನ ದಾಳಿ ನಡೆಸಿ ಹಿಂದಕ್ಕಟ್ಟಿದೆ.

‘ಆರ್‌.ಎಸ್‌ ಪುರದ ಅರ್ನಿಯಾ ಸೆಕ್ಟರ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿಯ ಬಳಿ ಇಂದು ಮುಂಜಾನೆ 4.45ರ ಸುಮಾರಿನಲ್ಲಿ ಪಾಕ್‌ ಕಡೆಯಿಂದ ಡ್ರೋನ್‌ವೊಂದು ಭಾರತದತ್ತ ಬರುತ್ತಿದ್ದದ್ದನ್ನು ಸೈನಿಕರು ಪತ್ತೆ ಮಾಡಿದ್ದರು’ ಎಂದು ಬಿಎಸ್‌ಎಫ್ ಮೂಲಗಳು ಹೇಳಿವೆ.

‘ಡ್ರೋನ್‌ನತ್ತ ಏಳರಿಂದ ಎಂಟು ಸುತ್ತು ಗುಂಡುಗಳನ್ನು ಹಾರಿಸಲಾಯಿತು. ಹೀಗಾಗಿ ಅದು ಪಾಕಿಸ್ತಾನದ ಕಡೆಗೆ ಹಿಂತಿರುಗಿತು’ ಎಂದು ಬಿಎಸ್‌ಎಫ್‌ ತಿಳಿಸಿದೆ.

ಮೇ 7 ರಂದು ಕೂಡ, ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ಬರುತ್ತಿದ್ದ ಡ್ರೋನ್‌ವೊಂದನ್ನು ಬಿಎಸ್ಎಫ್ ಪಡೆ ಗುಂಡು ಹೊಡೆದು ಹಿಮ್ಮೆಟ್ಟಿಸಿತ್ತು.

ಮೇ 9ರಂದು ಪಂಜಾಬ್‌ನ ಅಮೃತಸರದ ಅಂತರಾಷ್ಟ್ರೀಯ ಗಡಿಯ ಸಮೀಪ 10 ಕೆ.ಜಿ.ಯಷ್ಟು ಹೆರಾಯಿನ್‌ ಹೊತ್ತು ಬರುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್‌ ಪಡೆ ಹೊಡೆದುರುಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು