ಸೋಮವಾರ, ಏಪ್ರಿಲ್ 12, 2021
28 °C
ಪಂಜಾಬ್ ಪೊಲೀಸ್ ಮತ್ತು ಬಿಎಸ್‌ಎಫ್ ಜಂಟಿ ಕಾರ್ಯಾಚರಣೆ

ಅಮೃತಸರ ಗಡಿಯಲ್ಲಿ ಪಾಕ್‌ ಕಳ್ಳಸಾಗಣೆದಾರನ ಹತ್ಯೆ: ಹೆರಾಯಿನ್, ಶಸ್ತ್ರಾಸ್ತ್ರ ವಶ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಅಮೃತಸರ: ಇಲ್ಲಿನ ಭಾರತ – ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಮೂಲಕ ಮಾದಕವಸ್ತುಗಳೊಂದಿಗೆ ಅಕ್ರಮವಾಗಿ ಭಾರತದೊಳಕ್ಕೆ ನುಸುಳುತ್ತಿದ್ದ ಪಾಕಿಸ್ತಾನದ ಕಳ್ಳಸಾಗಣೆದಾರನ್ನು ಪಂಜಾಬ್ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರು ಜಂಟಿ ಕಾರ್ಯಾಚರಣೆ ನಡೆಸಿ ಗುಂಡಿಕ್ಕಿ ಕೊಂದಿದ್ದಾರೆ.

ಪಾಕಿಸ್ತಾನದ ಕಳ್ಳಸಾಗಣೆದಾರ ಸುಮಾರು 22 ಕೆಜಿ ತೂಕದ 22 ಪೊಟ್ಟಣಗಳ ಹೆರಾಯಿನ್‌ನೊಂದಿಗೆ ಇಲ್ಲಿನ ಅಂತರರಾಷ್ಟ್ರೀಯ ಗಡಿ ಮೂಲಕ ಭಾರತದೊಳಗೆ ನುಸುಳುತ್ತಿದ್ದ. ಖಚಿತ ಮಾಹಿತಿಯೊಂದಿಗೆ ಎಸ್‌ಎಸ್‌ಪಿ ಧ್ರುವಾ ದಹಿಯಾ ನೇತೃತ್ವದ ಪಂಜಾಬ್ ಪೊಲೀಸ್ ತಂಡ ಮತ್ತು ಗಡಿ ಭದ್ರತಾ ಪಡೆಗಳು ಕಕ್ಕರ್ ಗಡಿ ಔಟ್‌ಪೋಸ್ಟ್‌ನಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿದರು.

ಜಂಟಿ ಕಾರ್ಯಾಚರಣೆಯಲ್ಲಿ ಗಡಿ ಭಾಗದಲ್ಲಿ ಪಾಕಿಸ್ತಾನಿ ಕಳ್ಳಸಾಗಣೆದಾರರನ ಚಲನವಲವನ್ನು ಭದ್ರತಾ ಸಿಬ್ಬಂದಿ ಗುರುತಿಸಿದ್ದರು. ಈ ವೇಳೆ ಕಳ್ಳಸಾಗಣೆದಾರ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ. ಇದಕ್ಕೆ ಪ್ರತಿಯಾಗಿ ಆತನ ಮೇಲೆ ಧ್ರುವಾ ನೇತೃತ್ವದ ಯೋಧರ ಪಡೆ ಗುಂಡಿನ ದಾಳಿ ನಡೆಸಿ, ಆತನನ್ನು ಹತ್ಯೆ ಮಾಡಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹತ್ಯೆಯಾದ ವ್ಯಕ್ತಿಯಿಂದ 22 ಕೆ.ಜಿ ತೂಕದ ಹೆರಾಯಿನ್, ಎರಡು ಎಕೆ 47 ರೈಫಲ್ಸ್‌, 4 ಮ್ಯಾಗಜಿನ್ಸ್‌, ಪಾಕಿಸ್ತಾನದ ಸಿಮ್‌ಕಾರ್ಡ್‌ ಇರುವ ಒಂದು ಮೊಬೈಲ್ ಫೋನ್ ಮತ್ತು ₹210 ನಗದು (ಪಾಕಿಸ್ತಾನದ ಕರೆನ್ಸಿ) ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು