ಗುರುವಾರ , ಮಾರ್ಚ್ 23, 2023
21 °C

ಸುಲಿಗೆ ಪ್ರಕರಣ: ಇಬ್ಬರು ಪೊಲೀಸ್‌ ಅಧಿಕಾರಿಗಳು ಸಿಐಡಿ ವಶಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಮತ್ತು ಇತರರ ವಿರುದ್ಧ ದಾಖಲಾಗಿರುವ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಇಲ್ಲಿನ ನ್ಯಾಯಾಲಯವು ಏಳು ದಿನಗಳವಾರೆಗೆ ಮಹಾರಾಷ್ಟ್ರದ ಸಿಐಡಿ ವಶಕ್ಕೆ ನೀಡಿದೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ಶ್ಯಾಮಸುಂದರ್‌ ಅಗರ್‌ವಾಲ್‌ ಅವರು ಜುಲೈ 22ರಂದು ಸುಲಿಗೆ ಪ್ರಕರಣ ದಾಖಲಿಸಿದ್ದರು. ಇನ್‌ಸ್ಪೆಕ್ಟರ್‌ಗಳಾದ ನಂದಕುಮಾರ್‌ ಗೋಪಾಲೆ ಮತ್ತು ಅಶಾ ಕೊರ್ಕೆ ಅವರನ್ನು ಸಿಐಡಿ ಪೊಲೀಸರು ಸೋಮವಾರ ಬಂಧಿಸಿದ್ದರು. ಇಬ್ಬರು ಆರೋಪಿಗಳನ್ನು ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಎಫ್‌ಐಆರ್‌ನಲ್ಲಿ ಪರಮ್ ಬೀರ್ ಸಿಂಗ್ ಮತ್ತು ಐವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಏಳು ಮಂದಿಯನ್ನು ಹೆಸರಿಸಲಾಗಿದೆ. ಗೋಪಾಲೆ, ಕೊರ್ಕೆ ಅವರಲ್ಲದೆ, ಡಿಸಿಪಿ (ಅಪರಾಧ ವಿಭಾಗ) ಅಕ್ಬರ್ ಪಠಾಣ್, ಎಸಿಪಿಗಳಾದ ಶ್ರೀಕಾಂತ್ ಶಿಂಧೆ ಮತ್ತು ಸಂಜಯ್ ಪಾಟೀಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು