ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್ ದರ ₹14 ಕಡಿಮೆ: ಗುಜರಾತ್‌ನಲ್ಲಿ ಖರೀದಿಗೆ ಮುಗಿಬಿದ್ದ ಮಹಾರಾಷ್ಟ್ರ ಜನ

ಅಕ್ಷರ ಗಾತ್ರ

ಮುಂಬೈ: ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಇರುವ ಕಾರಣಕ್ಕೆ ಮಹಾರಾಷ್ಟ್ರ ಗಡಿ ಜನರು ಗುಜರಾತ್‌ನಲ್ಲಿ ಇಂಧನ ಖರೀದಿಸಲು ಮುಂದಾಗಿದ್ದಾರೆ.

ಮಹಾರಾಷ್ಟ್ರ ಗಡಿಯಿಂದ ಸುಮಾರು 2 –3 ಕಿ.ಮೀ. ದೂರದಿಂದ ವಾಹನಗಳ ಮಾಲೀಕರು ಪೆಟ್ರೋಲ್‌, ಡೀಸೆಲ್‌ಗಾಗಿ ಗುಜರಾತ್‌ಗೆ ತೆರಳುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ಹೋಲಿಸಿದರೆ, ಗುಜರಾತ್‌ನಲ್ಲಿ ಪೆಟ್ರೋಲ್‌ಗೆ ₹14 ಹಾಗೂ ಡೀಸೆಲ್‌ಗೆ ₹ 3.5 ಕಡಿಮೆ ದರವಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

‘ನಮ್ಮ ಬಂಕ್‌ ಮಹಾರಾಷ್ಟ್ರ ಗಡಿಯಿಂದ 2 ಕಿ.ಮೀ ದೂರದಲ್ಲಿದೆ. ಪ್ರತಿ ಲೀಟರ್ ಪೆಟ್ರೋಲ್‌ ದರ ₹14 ಹಾಗೂ ಡೀಸೆಲ್‌ಗೆ ₹ 3.5 ಕಡಿಮೆ ಇರುವುದರಿಂದ ಅಲ್ಲಿನ ಜನರು ನಮ್ಮ ಬಂಕ್‌ಗೆ ಬಂದು ಇಂಧನ ಖರೀದಿಸುತ್ತಿದ್ದಾರೆ’ ಎಂದು ಪೆಟ್ರೋಲ್‌ ಬಂಕ್‌ ಮಾಲೀಕ ವಾಲ್ಸಾದ್‌ ಹೇಳಿದ್ದಾರೆ.

‘ನಾನು ಉದ್ಯೋಗ ನಿಮಿತ್ತ ಗುಜರಾತ್ - ಮಹಾರಾಷ್ಟ್ರ ಗಡಿಯಲ್ಲಿ ಪ್ರತಿನಿತ್ಯ ಓಡಾಡುತ್ತೇನೆ. ಹಾಗಾಗಿ ವಾಲ್ಸಾದ್‌ ಅವರ ಬಂಕ್‌ನಲ್ಲಿ ಪೆಟ್ರೋಲ್‌ ಖರೀದಿಸುತ್ತೇನೆ. ಇದರಿಂದಾಗಿ ಲೀಟರ್‌ ಪೆಟ್ರೋಲ್‌ಗೆ ₹14ರಂತೆ ತಿಂಗಳಿಗೆ ₹3000 ಉಳಿತಾಯವಾಗುತ್ತಿದೆ’ ಎಂದು ಮಹಾರಾಷ್ಟ್ರದ ಗ್ರಾಹಕರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT