ಶುಕ್ರವಾರ, ಮೇ 20, 2022
24 °C

ರಾಜ್ಯಸಭೆ: ಪೆಟ್ರೋಲ್‌ ಬೆಲೆ ₹ 100 ಸಮೀಪ, ಸಂಕಷ್ಟದಲ್ಲಿ ಜನ–ಮಲ್ಲಿಕಾರ್ಜುನ ಖರ್ಗೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಇಂಧನ ಬೆಲೆ ಏರಿಕೆಯಾಗುತ್ತಿರುವ ಕುರಿತು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಬಜೆಟ್‌ ಅಧಿವೇಶನದ ಮುಂದುವರಿದ ಭಾಗ ಸೋಮವಾರದಿಂದ ಆರಂಭವಾಗಿದೆ.

'ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ಕ್ರಮವಾಗಿ ₹100 ಮತ್ತು ₹80 ತಲುಪಿದೆ. ಎಲ್‌ಪಿಜಿ ಬೆಲೆ ಸಹ ಹೆಚ್ಚಳವಾಗಿದೆ' ಎಂದು ಖರ್ಗೆ ಹೇಳಿದರು.

ಅಬಕಾರಿ ಸುಂಕ/ ಸೆಸ್‌ ವಿಧಿಸುವ ಮೂಲಕ ₹21 ಲಕ್ಷ ಕೋಟಿ ಸಂಗ್ರಹಿಸಲಾಗಿದೆ, ಇದರಿಂದಾಗಿ ರೈತರು ಸೇರಿದಂತೆ ಇಡೀ ರಾಷ್ಟ್ರವೇ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.

ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಕಾಂಗ್ರೆಸ್‌ ಸಂಸದರು ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು. 'ಮೊದಲ ದಿನವೇ ತೀವ್ರವಾದ ಕ್ರಮಕೈಗೊಳ್ಳಲು ಇಚ್ಛಿಸುವುದಿಲ್ಲ' ಎಂದು ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಪ್ರತಿಕ್ರಿಯಿಸಿದರು.

Live Updates| Karnataka Budget 2021: ಬಜೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ: ಯಡಿಯೂರಪ್ಪ

ರಾಜ್ಯಸಭೆ ಕಲಾಪವನ್ನು ಬೆಳಿ‌ಗ್ಗೆ 11ರ ವರೆಗೂ ಮುಂದೂಡಲಾಯಿತು. ಮತ್ತೆ ಕಲಾಪ ಶುರುವಾಗುತ್ತಿದ್ದಂತೆ ಕಾಂಗ್ರೆಸ್‌ ಸಂಸದರು ಘೋಷಣೆ ಮುಂದುವರಿಸಿದ್ದರಿಂದ ಮಧ್ಯಾಹ್ನ 1ರ ವರೆಗೂ ಸದನದ ಕಲಾಪ ಮುಂದೂಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು