ಬುಧವಾರ, ಆಗಸ್ಟ್ 17, 2022
28 °C

ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಲಸಿಕೆ ಬಳಸಲು ಫೈಜರ್ ಮನವಿ

ಪಿಟಿಐ/ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫೈಜರ್ ಕಂಪನಿ ತಾನು ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆಯನ್ನು ಭಾರತದಲ್ಲಿ ತುರ್ತುಸಂದರ್ಭದಲ್ಲಿ ಬಳಸಲು ಅನುಮತಿ ಕೋರಿದೆ. ತುರ್ತು ಸಂದರ್ಭದಲ್ಲಿ ಈ ಲಸಿಕೆಯನ್ನು ಬಳಸಲು ಬ್ರಿಟನ್ ಮತ್ತು ಬಹ್ರೇನ್ ಸರ್ಕಾರಗಳು ಈಗಾಗಲೇ ಅನುಮತಿ ನೀಡಿವೆ.

ಬ್ರಿಟನ್‌ನಲ್ಲಿ ಈ ವಾರದಿಂದಲೇ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ. ಆದರೆ, ಲಸಿಕೆ ಬಳಕೆಗೆ ಬ್ರಿಟನ್ ಅತ್ಯಂತ ತರಾತುರಿಯಲ್ಲಿ ಅನುಮತಿ ನೀಡಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಫೈಜರ್ ಕಂಪನಿಯು ಭಾರತದ ಪ್ರಧಾನ ಔಷಧ ನಿಯಂತ್ರಕರಿಗೆ (ಡಿಸಿಜಿಐ) ಅನುಮತಿ ಕೋರಿ ಡಿಸೆಂಬರ್ 4ರಂದು ಪತ್ರ ಬರೆದಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ‘ಭಾರತ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡುತ್ತೇವೆ. ಸರ್ಕಾರದ ಗುತ್ತಿಗೆಯ ಮೂಲಕ ಮಾತ್ರ ಲಸಿಕೆ ಪೂರೈಸುತ್ತೇವೆ ಎಂದು ಫೈಜರ್ ಹೇಳಿದೆ’ ಎಂದು ಪಿಟಿಐ ವರದಿ ಮಾಡಿದೆ.

‘ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಿರುವ ಮತ್ತು ಸ್ಥಳೀಯವಾಗಿಯೇ ತಯಾರಾಗುವ ಲಸಿಕೆಯನ್ನು ಬಳಸುವುದಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ’ ಎಂದು ಸರ್ಕಾರದ ಮೂಲಗಳು ಹೇಳಿವೆ ಎಂದು ರಾಯಿಟರ್ಸ್ ಹೇಳಿದೆ. ಫೈಜರ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಷ್ಟು ತಂಪಿನಲ್ಲಿ ಇರಿಸಬೇಕು. ಭಾರತದಲ್ಲಿ ಇಂಥ ವ್ಯವಸ್ಥೆ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು