ಗುರುವಾರ , ನವೆಂಬರ್ 26, 2020
22 °C
‘ದ್ವೇಷ ಭಾಷಣ, ನಕಲಿ ಸುದ್ದಿ ತಡೆಗೆ ಈ ಕ್ರಮ ಅಗತ್ಯ’

ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು: ‘ಸುಪ್ರೀಂ’ಗೆ ಪಿಐಎಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ, ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು(ಪಿಐಎಲ್‌) ಸಲ್ಲಿಕೆಯಾಗಿದೆ.

ದ್ವೇಷ ಭಾಷಣ ಹಾಗೂ ನಕಲಿ ಸುದ್ದಿಗಳ ಹರಡುವಿಕೆಗೆ ಆಯಾ ಸಾಮಾಜಿಕ ಜಾಲತಾಣಗಳನ್ನೇ ಜವಾಬ್ದಾರಿಯನ್ನಾಗಿಸಲು ಈ ಕಾನೂನು ಅಗತ್ಯವಾಗಿದೆ ಎಂದು ಅರ್ಜಿದಾರ, ವಕೀಲ ವಿನೀತ್‌ ಜಿಂದಾಲ್‌ ಆಗ್ರಹಿಸಿದ್ದಾರೆ. ಜೊತೆಗೆ ದ್ವೇಷ ಭಾಷಣ ಹಾಗೂ ಸುಳ್ಳು ಸುದ್ದಿಗಳನ್ನು ನಿಗದಿತ ಅವಧಿಯೊಳಗೆ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವ ವ್ಯವಸ್ಥೆಯನ್ನೂ ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಜಿಂದಾಲ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

‘ಇತ್ತೀಚೆಗೆ ನಡೆದ ದೆಹಲಿ ಗಲಭೆ, ಪುಣೆಯಲ್ಲಿ 2014ರಲ್ಲಿ ನಡೆದ ಕೋಮುಗಲಭೆ, 2013ರಲ್ಲಿ ಮುಜಾಫರನಗರದಲ್ಲಿ ನಡೆದ ಗಲಭೆಯಲ್ಲಿ ಸಾಮಾಜಿಕ ಜಾಲತಾಣಗಳು ಗಲಭೆ ಪ್ರಚೋದಿಸುವಲ್ಲಿ ಪಾತ್ರವಹಿಸಿದ್ದವು. ದೇಶದಲ್ಲಿ ದ್ವೇಷಭಾಷಣಗಳಿಗೆ ಸಾಮಾಜಿಕ ಜಾಲತಾಣಗಳನ್ನು ನೇರವಾಗಿ ಹೊಣೆಯಾಗಿಸುವ ಅವಶ್ಯಕತೆ ಇದೆ. ಆಸ್ಟ್ರೇಲಿಯಾದಲ್ಲಿ ತಂತ್ರಜ್ಞಾನ ಕಂಪನಿಗಳು, ಮಾಧ್ಯಮ ಕಂಪನಿಗಳು ಹಾಗೂ ಕಾನೂನು ತಜ್ಞರ ಟೀಕೆಯ ಹೊರತಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿನ ಹಿಂಸಾತ್ಮಕ ವಿಡಿಯೊಗಳನ್ನು ತೆಗೆದುಹಾಕುವ ಕಾನೂನನ್ನು ಅಲ್ಲಿನ ಸಂಸತ್‌ ಜಾರಿಗೊಳಿಸಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು