ಬುಧವಾರ, ಡಿಸೆಂಬರ್ 7, 2022
22 °C

ಕರ್ನಾಟಕದ ನಾಲ್ಕು ಆನೆಗಳು ಪಿಲಿಭಿತ್‌ ಹುಲಿ ರಕ್ಷಿತಾರಣ್ಯಕ್ಕೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಿಲಿಭಿತ್‌ (ಪಿಟಿಐ): ಉತ್ತರ ಪ್ರದೇಶ ಸರ್ಕಾರವು ತನ್ನ ಪಿಲಿಭಿತ್‌ ರಕ್ಷಿತಾರಣ್ಯಕ್ಕೆ (ಪಿಟಿಆರ್‌) ಬಿಡಲು ಬುಧವಾರ ಕರ್ನಾಟಕದಿಂದ ನಾಲ್ಕು ಆನೆಗಳನ್ನು ಪಡೆದುಕೊಂಡಿದೆ.

ಕಾಡಿನ ಪಕ್ಕದಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಾನವ- ವನ್ಯಜೀವಿ ಸಂಘರ್ಷದ ಘಟನೆಗಳನ್ನು ಪರೀಕ್ಷಿಸಲು ಕರ್ನಾಟಕದ ಅರಣ್ಯ ಇಲಾಖೆಯಿಂದ ನಾಲ್ಕು ಆನೆಗಳನ್ನು ತರಲಾಗಿದೆ. ಗಸ್ತು ಮೂಲಕ ಆನೆಗಳ ಚಲನವಲನದ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಪಿಟಿಆರ್‌ ಉಪ ನಿರ್ದೇಶಕ ನವೀನ್‌ ಖಂಡೇಲ್‌ವಾಲ್‌ ಹೇಳಿದ್ದಾರೆ.

ಮೀಸಲು ಪ್ರದೇಶದಿಂದ ಹೊರಬರುವ ಹುಲಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಪುನಾ ಕಾಡಿಗೆ ಸೇರಿಸಲು ಈ ಆನೆಗಳು ವಿಶೇಷ ರೀತಿಯಲ್ಲಿ ನೆರವಾಗಲಿವೆ ಎಂದು ಅವರು ತಿಳಿಸಿದರು. 

ನಿಸರ್ಗ (12), ಮಣಿಕಂಠ (8) ಹೆಸರಿನ ಎರಡು ಆನೆಗಳು ಮತ್ತು ಏಳು ಹಾಗೂ 14 ವರ್ಷದ ಇನ್ನೆರಡು ಆನೆಗಳನ್ನು ಉತ್ತರಪ್ರದೇಶ ಅರಣ್ಯ ಸಚಿವ ಅರುಣ್ ಸಕ್ಸೇನಾ ಅವರು ಮಾಲಾ ವಲಯದಲ್ಲಿ ಸ್ವಾಗತಿಸಿ, ಪೂಜೆ ಸಲ್ಲಿಸಿದರು. ಈ ಆನೆಗಳು ಪ್ರವಾಸಿಗರನ್ನು ಆಕರ್ಷಿಸಲು ನೆರವಾಗಲಿವೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು