ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯಲ್ಲಿ ಆಗಿರುವ ಕೆಲಸ ನೋಡಿ: ಖರ್ಗೆಗೆ ರಾಜ್ಯಸಭೆಯಲ್ಲಿ ಮೋದಿ ಉತ್ತರ

Last Updated 9 ಫೆಬ್ರವರಿ 2023, 11:56 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗೌತಮ್ ಅದಾನಿ ಅವರ ಸಂಪತ್ತು ಬೃಹತ್ ಪ್ರಮಾಣದಲ್ಲಿ ಹೆಚ್ಚಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಡಿದ ಆರೋಪಕ್ಕೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಮಾತನಾಡಿದ ಮೋದಿ, ನಾನು ಪದೇ ಪದೇ ಕಲಬುರಗಿಗೆ ಭೇಟಿ ನೀಡುತ್ತೇನೆ ಎಂದು ಖರ್ಗೆಯವರು ಹೇಳುತ್ತಾರೆ. ಅಲ್ಲಿ ಆಗಿರುವ ಕೆಲಸದ ಬಗ್ಗೆ ಅವರು ಗಮನ ಹರಿಸಬೇಕು. ಕಲಬುರಗಿಯಲ್ಲಿ 8 ಲಕ್ಷ ಸೇರಿದಂತೆ ಕರ್ನಾಟಕದಲ್ಲಿ 1.70 ಕೋಟಿ ಜನ್‌ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಿಂದ ಹಲವರ ಸಬಲೀಕರಣ ಸಾಧ್ಯವಾಗಿದೆ. ಮತ್ತೆ ಕೆಲವು ಖಾತೆಗಳು ಬಂದ್ ಆಗಿರುವುದರಿಂದ ಜನ ನೋವಿನಲ್ಲಿರುವುದು ನನಗೆ ಅರ್ಥವಾಗುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಸಾಮಾನ್ಯ ಜನ ನಮ್ಮ ಆದ್ಯತೆ. ಹೀಗಾಗಿಯೇ 25 ಕೋಟಿ ಜನರಿಗೆ ಎಲ್‌ಪಿಜಿ ಸಂಪರ್ಕ ನೀಡಿದ್ದೇವೆ. ಕಾಂಗ್ರೆಸ್ಸಿಗರು ಸದಾ ಗರೀಬಿ ಹಠಾವೊ ಎಂದು ಹೇಳುತ್ತಿರುತ್ತಾರೆ. ಆದರೆ, 4 ದಶಕಗಳಿಂದ ಅವರು ಅದನ್ನು ಮಾಡಿಲ್ಲ. ಆದರೆ, ನಾವು ದೇಶದ ಜನರ ಆಶಯ ಮತ್ತು ನಿರೀಕ್ಷೆಯನ್ನು ತಲುಪಲು ಕಠಿಣ ಪರಿಶ್ರಮ ಹಾಕುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಅರ್ಹ ಎಲ್ಲ ಫಲಾನುಭವಿಗಳಿಗೂ ಸರ್ಕಾರದ ಯೋಜನೆಗಳ ಅನುಕೂಲ ಸಿಗುವಂತೆ ಮಾಡುವುದು ನಿಜವಾದ ಜಾತ್ಯತೀತತೆ ಎಂದು ಮೋದಿ ಪ್ರತಿಪಾದಿಸಿದರು.

‘ನಾ ಖಾವುಂಗಾ. ನಾ ಖಾನೆದೂಂಗಾ’ ಎಂದು ಮೋದಿ ಅವರು 2014ರಲ್ಲಿ ಹೇಳಿದ್ದರು. ಇದು ಪೊಳ್ಳು ಭರವಸೆಯೇ. ಮೋದಿ ಅವರ ಆಪ್ತ ಸ್ನೇಹಿತನ ಸಂಪತ್ತು 13 ಪಟ್ಟು ಹೆಚ್ಚಿದೆ. 2019ರಲ್ಲಿ ₹1 ಲಕ್ಷ ಕೋಟಿಯಷ್ಟಿದ್ದ ಸಂಪತ್ತು ₹12 ಲಕ್ಷ ಕೋಟಿಗೆ ಏರಿದ್ದು ಹೇಗೆ? ಎರಡು ವರ್ಷದಲ್ಲಿ ಅದ್ಯಾವ ಪವಾಡ ನಡೆಯಿತು. ಇದು ಗೆಳೆತನದ ಫಲವೇ’ ಎಂದು ಅದಾನಿ ಹೆಸರು ಪ್ರಸ್ತಾ‍ಪಿಸದೆ ಖರ್ಗೆ ಬುಧವಾರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT