ಶನಿವಾರ, ಮೇ 15, 2021
24 °C

ಕೋವಿಡ್-19: ಇಂದು ಸಂಜೆ ಲಸಿಕೆ ಉತ್ಪಾದಕ ಕಂಪನಿಗಳೊಂದಿಗೆ ಪ್ರಧಾನಿ ಮೋದಿ ಸಭೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್-‌19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) ಸಂಜೆ 6 ಗಂಟೆಗೆ ಲಸಿಕೆ ಉತ್ಪಾದಕ ಕಂಪನಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಲಿದ್ದಾರೆ.

ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ದೇಶದ ವಿವಿದೆಢೆ ಇರುವ ವೈದ್ಯರು, ಲಸಿಕೆ ಉತ್ಪಾದಕ ಕಂಪನಿಗಳೊಂದಿಗೆ ಎರಡು ಬಾರಿ ಸಭೆ ನಡೆಸಿದ್ದರು.

ಏತನ್ಮಧ್ಯೆ, ದೇಶದಲ್ಲಿ ಸತತ ಆರನೇ ದಿನವೂ ಸತತ 2 ಲಕ್ಷಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 2.59 ಲಕ್ಷ ಪ್ರಕರಣಗಳು ವರದಿಯಾಗಿದ್ದು, 1,761 ಸೋಂಕಿತರು ಮೃತಪಟ್ಟಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಇನ್ನೂ 20,31,977 ಸಕ್ರಿಯ ಪ್ರಕರಣಗಳಿವೆ.

ಇವನ್ನೂ ಓದಿ...

Covid-19 India Update: 2.59 ಲಕ್ಷ ಹೊಸ ಪ್ರಕರಣ, 1,761 ಮಂದಿ ಸಾವು

ಕೋವಿಡ್‌ ನಿಯಂತ್ರಣಕ್ಕೆ ಹಲವು ಕ್ರಮ

ಬೆಂಗಳೂರು ಸಚಿವರು, ಜನಪ್ರತಿನಿಧಿಗಳ ಸಭೆ: ಕಠಿಣ ನಿಯಮ ಇಂದು ಪ್ರಕಟ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು