ಶನಿವಾರ, ಏಪ್ರಿಲ್ 1, 2023
23 °C
ಹಲವೆಡೆ ಡೋಸ್‌ಗಳು ಖಾಲಿ

ಲಸಿಕೆ ಕಾರ್ಯಕ್ರಮ ಮತ್ತೆ ಕುಂಠಿತ: ಕೇಂದ್ರದಿಂದ ಪೂರೈಕೆಯಾಗದ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಲಸಿಕೆಯ ಕೊರತೆಯಾಗಿರುವ ಕಾರಣ ದೇಶದ ಹಲವು ರಾಜ್ಯಗಳು, ತಮ್ಮಲ್ಲಿನ ಹಲವು ಕೇಂದ್ರಗಳಲ್ಲಿ ಲಸಿಕೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿವೆ. ಅಲ್ಲದೆ, ಜುಲೈ ಮೊದಲ ವಾರದಲ್ಲಿ ಪ್ರತಿದಿನ ನೀಡಲಾಗುತ್ತಿರುವ ಸರಾಸರಿ ಲಸಿಕೆ ಡೋಸ್‌ಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ.

ಉತ್ತರದ ಉತ್ತರ ಪ್ರದೇಶದಿಂದ ದಕ್ಷಿಣದ ತಮಿಳುನಾಡು ಮತ್ತು ಕೇರಳದವರೆಗೆ, ಪಶ್ಚಿಮದ ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಪೂರ್ವದ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳವರೆಗೆ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್ ಡೋಸ್‌ಗಳ ಕೊರತೆ ಆರಂಭವಾಗಿದೆ. ಹಲವು ಲಸಿಕಾ ಕೇಂದ್ರಗಳನ್ನು ಸರ್ಕಾರಗಳು ಮುಚ್ಚಿವೆ. 

ತಮಿಳುನಾಡಿಗೆ ಈವರೆಗೆ 1.58 ಕೋಟಿ ಡೋಸ್‌ ಲಸಿಕೆ ಪೂರೈಸಲಾಗಿದೆ. ಇದರಲ್ಲಿ ಬಹುತೇಕ ಎಲ್ಲಾ ಡೋಸ್‌ಗಳನ್ನು ಈಗಾಗಲೇ ನೀಡಲಾಗಿದೆ. ಈಗ ಲಸಿಕೆ ಇಲ್ಲದೇ ಇರುವ ಕಾರಣ ರಾಜ್ಯದ ಬಹುತೇಕ ಎಲ್ಲಾ ಲಸಿಕಾ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

ಸತತ ಪೂರೈಕೆ ಇಲ್ಲದ ಕಾರಣ ಕೇರಳದ ಹಲವೆಡೆ ಲಸಿಕೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ. ಹಲವರಿಗೆ ಅವಧಿ ಮೀರಿದರೂ, ಎರಡನೇ ಡೋಸ್‌ ಸಿಗದೇ ಇರುವ ಅಪಾಯ ಎದುರಾಗಿದೆ. ಸಾಕಷ್ಟು ಮಂದಿ, ಲಸಿಕೆ ಲಭ್ಯವಿರುವ ಪಕ್ಕದ ಜಿಲ್ಲೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. 

ಉತ್ತರ ಪ್ರದೇಶದ ಪ್ರಯಾಗ್‌ರಾಜ್, ಗೌತಮ ಬುದ್ಧ ನಗರ ಜಿಲ್ಲೆಗಳಲ್ಲಿ ಲಸಿಕೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ‘ಲಸಿಕೆ ಕೊರತೆ ಇರುವ ಕಾರಣ ಪ್ರತಿದಿನ 10 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಹೀಗೇ ಆದರೆ, ಡಿಸೆಂಬರ್ ಅಂತ್ಯದ ವೇಳೆಗೆ 18 ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲಾ ಜನರಿಗೆ ಲಸಿಕೆ ನೀಡುವುದು ಸಾಧ್ಯವಿಲ್ಲ’ ಎಂದು ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು