ಕ್ಲರ್ಕ್ ಕೆಲಸದಿಂದ ರಾಷ್ಟ್ರಪತಿ ಭವನದವರೆಗೆ ಪ್ರಣವ್ ಮುಖರ್ಜಿ ನಡೆದುಬಂದ ಹಾದಿಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ...

* ಸ್ವಾತಂತ್ರ್ಯ ಹೋರಾಟಗಾರ ಕಾಮದಾ ಕಿಂಕರ್ ಮುಖರ್ಜಿ ಮತ್ತು ರಾಜಲಕ್ಷ್ಮಿ ದಂಪತಿಯ ಮಗನಾಗಿ 1935ರ ಡಿಸೆಂಬರ್ 11ರಂದು ಪ್ರಣವ್ ಮುಖರ್ಜಿ ಜನನ. ಪಶ್ಚಿಮ ಬಂಗಾಳದ ಮಿರತಿ ಎಂಬುದು ಹುಟ್ಟೂರು. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ, ರಾಜಕೀಯಶಾಸ್ತ್ರ ಹಾಗೂ ಕಾನೂನು ಪದವಿ ಅಧ್ಯಯನ

* ಅಂಚೆ ಮತ್ತು ಟೆಲಿಗ್ರಾಫ್ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಣೆ. 1963ರಲ್ಲಿ ವಿದ್ಯಾನಗರ ಕಾಲೇಜಿನಲ್ಲಿ ರಾಜಕೀಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ. ‘ದೇಶರ್ ಡಾಕ್’ ಪತ್ರಿಕೆಯ ಪತ್ರಕರ್ತರಾಗಿಯೂ ಕೆಲಸ ನಿರ್ವಹಣೆ

* 1969ರಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರದ ಉಪಚುನಾವಣೆಯಲ್ಲಿ ವಿ.ಕೆ. ಕೃಷ್ಣ ಮೆನನ್ ಅವರ ಚುನಾವಣಾ ಪ್ರಚಾರವನ್ನು ಪ್ರಣವ್ ನಿರ್ವಹಿಸಿದ ರೀತಿಯು ಇಂದಿರಾ ಗಾಂಧಿ ಅವರನ್ನು ಸೆಳೆಯಿತು. ಕಾಂಗ್ರೆಸ್ ಸೇರುವಂತೆ ಇಂದಿರಾ ಗಾಂಧಿ ಅವರಿಂದ ಪ್ರಣವ್ಗೆ ಆಹ್ವಾನ

* 1969ರಲ್ಲಿ ಬಾಂಗ್ಲಾ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆ. (1975, 1981, 1993, 1999ರಲ್ಲಿ ರಾಜ್ಯಸಭೆಗೆ ಪ್ರಣವ್ ಪುನರಾಯ್ಕೆ)ಬಾಂಗ್ಲಾ ಕಾಂಗ್ರೆಸ್ ಪಕ್ಷ ನಂತರ ಕಾಂಗ್ರೆಸ್ನಲ್ಲಿ ವಿಲೀನವಾಯಿತು.

* 1973ರಲ್ಲಿ ಕೈಗಾರಿಕೆ, ಹಡಗು ಮತ್ತು ಸಾರಿಗೆ ಇಲಾಖೆಗಳ ಸಹಾಯಕ ಸಚಿವರಾಗಿ ನೇಮಕ. ಬಳಿಕ ಹಣಕಾಸು ಇಲಾಖೆಯ ರಾಜ್ಯ ಸಚಿವರಾಗಿ ನೇಮಕ

* ಇಂದಿರಾ ಗಾಂಧಿ ಆಪ್ತ ಬಳಗದಲ್ಲಿದ್ದ ಪ್ರಣವ್, ತುರ್ತು ಪರಿಸ್ಥಿತಿಯ ಸಮಯದಲ್ಲಿ (1975–77) ಅವರ ಜತೆಗಿದ್ದರು

* 1979ರಲ್ಲಿ ಹಣಕಾಸು ಸಚಿವ ಹಾಗೂ ರಾಜ್ಯಸಭೆಯ ನಾಯಕನ ಜವಾಬ್ದಾರಿ

* 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಬಳಿಕ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿಕಾಂಗ್ರೆಸ್ ತೊರೆದ ಪ್ರಣವ್

* 1985ರಲ್ಲಿ ‘ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷ’ ಸ್ಥಾಪನೆ; ಇದು 1989ರಲ್ಲಿ ಕಾಂಗ್ರೆಸ್ ಜತೆ ವಿಲೀನ

* 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ ಪ್ರಧಾನಿ ಹುದ್ದೆಯ ಸಂಭಾವ್ಯರಲ್ಲಿ ಪ್ರಣವ್ ಇದ್ದರು. ಆದರೆ ಹುದ್ದೆ ಪಿ.ವಿ. ನರಸಿಂಹ ರಾವ್ ಅವರಿಗೆ ಒಲಿಯಿತು

* 1991–95ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ

* 1995–96ರವರೆಗೆ ನರಸಿಂಹ ರಾವ್ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿ ಕೆಲಸ

* 1998-99ರಲ್ಲಿ ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಪ್ರವೇಶ ಕೊಡಿಸುವಲ್ಲಿ ಪ್ರಣವ್ ಪಾತ್ರ ಹಿರಿದು

* 2004–06ರ ಅವಧಿಯಲ್ಲಿ ರಕ್ಷಣಾ ಸಚಿವರಾಗಿ;2006-09ರಲ್ಲಿ ವಿದೇಶಾಂಗ ಸಚಿವರಾಗಿ;2009–12ರ ಅವಧಿಯಲ್ಲಿ ಹಣಕಾಸು ಖಾತೆ ಸಚಿವರಾಗಿ ಕೆಲಸ

* ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆ; 2012–17ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿ ಹುದ್ದೆ ನಿರ್ವಹಣೆ; ಅನಾರೋಗ್ಯದ ಕಾರಣದಿಂದ ಮರುಆಯ್ಕೆಗೆ ಒಪ್ಪದ ಪ್ರಣವ್; 2019ರಲ್ಲಿ ದೇಶದ ಅತ್ಯುನ್ನತ ‘ಭಾರತ ರತ್ನ’ ಪುರಸ್ಕಾರಕ್ಕೆ ಆಯ್ಕೆ

* ಆಗಸ್ಟ್ 31, 2020ರಂದು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಪ್ರಣವ್ ಮುಖರ್ಜಿ ಕೊನೆಯುಸಿರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.