ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ತಿಳಿಸಿದ ಕೋವಿಂದ್

Last Updated 26 ಮಾರ್ಚ್ 2021, 3:38 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಆ ದೇಶದ ಜನರಿಗೆ ಶುಭಾಶಯ ತಿಳಿಸಿದ್ದಾರೆ.

ʼನಿಮ್ಮ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಘನ ಸರ್ಕಾರ ಮತ್ತು ಬಾಂಗ್ಲಾದೇಶದ ಜನರಿಗೆ ಭಾರತ ಮತ್ತು ನನ್ನ ಪರವಾಗಿ ಶುಭಾಶಯಗಳನ್ನು ಕೋರುತ್ತೇನೆ. 50 ವರ್ಷಗಳಅನುಕರಣೀಯಹಾಗೂ ಅನನ್ಯ ದ್ವಿಪಕ್ಷೀಯ ಸಂಬಂಧವನ್ನು ಭಾರತ ಮತ್ತು ಬಾಂಗ್ಲಾದೇಶ ಆಚರಿಸುತ್ತಿವೆʼ ಎಂದು ತಿಳಿಸಿದ್ದಾರೆ.

ʼಈ ವರ್ಷ, ಸ್ವಾತಂತ್ರ್ಯ ಸಮರದ ಗೆಲುವಿನ ಸುವರ್ಣ ಮಹೋತ್ಸವಆಚರಣೆಯಿಂದನಾನು ಖುಷಿಪಟ್ಟಿದ್ದೇನೆ. 20ನೇ ಶತಮಾನದ ಅತಿದೊಡ್ಡ ಆಡಳಿತಗಾರ ಬಂಗಬಂಧು ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಸ್ಮರಣೀಯ ಜನ್ಮ ಶತಮಾನೋತ್ಸವದ ಆಚರಣೆಯಿಂದ ಅದು ಮತ್ತಷ್ಟು ಹೆಚ್ಚಾಗಿದೆʼ ಎಂದಿದ್ದಾರೆ.

ಉಭಯ ದೇಶಗಳು ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಹೊಂದಿವೆ ಎಂದಿರುವಕೋವಿಂದ್‌,ʼಹಲವು ಕಾರ್ಯಕ್ರಮಗಳು ಮತ್ತು ನಿಮ್ಮ ಸರ್ಕಾರದ ಸಹಯೋಗದಲ್ಲಿನಮ್ಮ ಸರ್ಕಾರವೂ ಬಂಗಬಂಧು ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಿದೆʼ ಎಂದೂ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ನಂತರ ಅವರು ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರಯಾಣ ಇದಾಗಿದೆ.

ಶೇಖ್‌ ಮುಜಿಬುರ್‌ ರಹಮಾನ್‌ ಅವರು 1971ರ ಮಾರ್ಚ್‌ 26ರಂದು ಬಾಂಗ್ಲಾದೇಶವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ್ದರು. ಇದುಆ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿತ್ತು. ಪಾಕಿಸ್ತಾನದ ವಿರುದ್ಧ ನಡೆದ ಈ ಯುದ್ಧದಲ್ಲಿ ಭಾರತವು ಬಾಂಗ್ಲಾ ಸೇನೆಗೆ ಬೆಂಬಲ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT