ಗುರುವಾರ , ಡಿಸೆಂಬರ್ 3, 2020
18 °C
ಉತ್ತರ ಪ್ರದೇಶದಲ್ಲಿ ಎಂಎಸ್‌ಪಿ ಬೆಲೆಗಿಂತ ಕಡಿಮೆ ಬೆಲೆಗೆ ಭತ್ತ ಮಾರಾಟ

ಭತ್ತ ಖರೀದಿಯಲ್ಲಿ ಭ್ರಷ್ಟಾಚಾರ: ಕೇಂದ್ರದ ವಿರುದ್ಧ ಪ್ರಿಯಾಂಕ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಉತ್ತರ ಪ್ರದೇಶದ ರೈತರು ಬಲವಂತವಾಗಿ ಭತ್ತವನ್ನು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಅವರ ನೋವನ್ನು ಕೇಂದ್ರ ಸರ್ಕಾರ ಆಲಿಸುತ್ತಿಲ್ಲ‘ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ್ದು, ಮೊಹಮ್ಮದಿ ಖಿರಿ ಮಂಡಿಯಲ್ಲಿ ಭತ್ತ ಖರೀದಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ರೈತರೊಬ್ಬರು ಮಾತನಾಡಿರುವ ವಿಡಿಯೊವನ್ನು ಅದರೊಂದಿಗೆ ಪೋಸ್ಟ್‌ ಮಾಡಿದ್ದಾರೆ.‘

‘ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಉತ್ತರ ಪ್ರದೇಶ ಸರ್ಕಾರ  ಕೃಷಿ ಕಾನೂನುಗಳ ಕುರಿತು ಖಾತ್‌ ಸಮ್ಮೇಳನ ನಡೆಸುತ್ತಿದ್ದು, ರೈತರ ನೋವನ್ನು ಆಲಿಸುತ್ತಿಲ್ಲ‘ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಬಹುತೇಕ ಕಡೆ ರೈತರು ಬಲವಂತವಾಗಿ ತಾವು ಬೆಳೆದ ಭತ್ತವನ್ನು ಕ್ವಿಂಟಲ್‌ಗೆ ₹1000 ದಿಂದ ₹1100 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಕ್ವಿಂಟಲ್ ಭತ್ತಕ್ಕೆ ಸರ್ಕಾರ ₹1860  ಬೆಂಬಲ ಬೆಲೆ ನಿಗದಿ ಮಾಡಿದೆ‘ ಎಂದು ಅವರು ಉಲ್ಲೇಖಿಸಿದ್ದಾರೆ.

‘ಯಾವಾಗ ಬೆಂಬಲ ಬೆಲೆಯನ್ನು ಖಾತರಿ ಪಡಿಸುವುದಿಲ್ಲವೋ, ಆಗ ಇಂಥ ಪ್ರಕರಣಗಳು ನಡೆಯುತ್ತವೆ. ಇಲ್ಲಿ ಬೆಂಬಲ ಬೆಲೆ ಖಾತರಿ ಪಡೆಸಿಲ್ಲ‘ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಪಂಜಾಬ್‌ ಸರ್ಕಾರ ಮಂಗಳವಾರವಷ್ಟೇ ವಿಧಾನಸಭೆಯಲ್ಲಿ ಕೇಂದ್ರ ಕೃಷಿ ಕಾನೂನುಗಳ ವಿರುದ್ಧ, ನಾಲ್ಕು ಮಸೂದೆಗಳನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಘಟನೆಯ ನಂತರ, ಪ್ರಿಯಾಂಕಾ ಅವರು  ಕೃಷಿ ಕಾನೂನುಗಳನ್ನು ಉಲ್ಲೇಖಿಸಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು