ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಲಿಯನೇರ್ ಗೆಳೆಯರಿಗೆ' ಅನುಕೂಲ ಮಾಡಲು ಕೃಷಿ ಕಾನೂನುಗಳ ಜಾರಿ: ಪ್ರಿಯಾಂಕಾ ಗಾಂಧಿ

Last Updated 24 ಫೆಬ್ರುವರಿ 2021, 2:10 IST
ಅಕ್ಷರ ಗಾತ್ರ
ಮಥುರಾ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ 'ಕಿಸಾನ್ ಮಹಾಪಂಚಾಯತ್'ನಲ್ಲಿ ವಾಗ್ದಾಳಿ ನಡೆಸಿದ್ದು, 'ಸೊಕ್ಕಿನವರು" ಮತ್ತು ಅವರು ಜಾರಿಗೆ ತಂದ ನೀತಿಗಳ ಜವಾಬ್ದಾರಿಯನ್ನು ಹೊಂದಿರದ 'ಹೇಡಿ' ಎಂದು ಕರೆದಿದ್ದಾರೆ.

'ಆಂದೋಲನ್‌ಜೀವಿ' ಎಂದು ಹೇಳಿ ಸಂಸತ್ತಿನಲ್ಲಿ ರೈತರನ್ನು ಅಪಹಾಸ್ಯ ಮಾಡುವ ಮೂಲಕ ಪ್ರಧಾನಿಮೋದಿ ರೈತರಿಗೆ ಅವಮಾನ ಮಾಡಿದ್ದಾರೆ ಎಂದುಆರೋಪಿಸಿದರು.

ಕಾಂಗ್ರೆಸ್ಪಕ್ಷವು ಅಧಿಕಾರಕ್ಕೆ ಬಂದರೆ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸಲಿದೆ ಎಂದು ಭರವಸೆ ನೀಡಿದ ಪ್ರಿಯಾಂಕಾ, ಹಣ ಸಂಪಾದನೆಯಲ್ಲಿ ತೊಡಗಿರುವ ತಮ್ಮ 'ಬಿಲಿಯನೇರ್ ಗೆಳೆಯರಿಗೆ' ಅನುಕೂಲವಾಗುವಂತೆ (ನೋಟೋನ್ ಕಿ ಖೇತಿ) ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.

'ಸೊಕ್ಕಿನ ಸರ್ಕಾರಗಳಿಗೆ ಜನರು ಯಾವಾಗಲೂ ಪಾಠ ಕಲಿಸಿದ್ದಾರೆ ಮತ್ತು ಅದಕ್ಕೀಗ ಸಮಯ ಬಂದಿದೆ'. ಆಡಳಿತ ಪಕ್ಷವು ನೀಡಿದ್ದ ಎಲ್ಲಾ ಚುನಾವಣಾ ಭರವಸೆಗಳು ಸುಳ್ಳಾಗಿವೆ. ಸತ್ಯವೆೇನೆಂದರೆ ಪ್ರಧಾನಿ ಅಹಂಕಾರಿ ಮಾತ್ರವಲ್ಲದೆ ಹೇಡಿ. ಅವರ ನೀತಿಗಳನ್ನು ಪ್ರಶ್ನಿಸಿದ ತಕ್ಷಣ, ಅವರು ಮಾತನಾಡದೆ ಹಿಂದೆ ಸರಿಯುತ್ತಾರೆ. ಹೆಚ್ಚುತ್ತಿರುವ ಇಂಧನ ಬೆಲೆಗಳಿಗಾಗಿ ನಮ್ಮ ಪಕ್ಷವನ್ನು ತಪ್ಪಾಗಿ ದೂಷಿಸುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಸದ್ಯ, ಹಿಂದಿನ ಕಾಂಗ್ರೆಸ್ ಸರ್ಕಾರಗಳು ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿದ್ದವು, ಇಲ್ಲದಿದ್ದರೆ, ಪ್ರಸ್ತುತ ಸರ್ಕಾರವು ಏನನ್ನೂ ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪ್ರಧಾನಮಂತ್ರಿಯ 'ಬಿಲಿಯನೇರ್ ಸ್ನೇಹಿತರಿಗೆ' ಅನುಕೂಲವಾಗುವಂತೆ ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣವನ್ನು ಪರಿಚಯಿಸಲಾಯಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರೋಪಿಸಿದರು.

ಸಾರ್ವಜನಿಕ ವಲಯದ ಆಸ್ತಿಗಳನ್ನು ಮಾರಾಟ ಮಾಡುವ ಆಲೋಚನೆಯಿಂದ ಸರ್ಕಾರವು 'ಮಾದಕ ವ್ಯಸನಿಯಾಗಿದೆ'. ಬಿಜೆಪಿ ಅದನ್ನು ಮಾರಾಟ ಮಾಡದಂತೆ ತಡೆಯಬೇಕು ಎಂದು ಜನರನ್ನು ಒತ್ತಾಯಿಸಿದ ಅವರು, ಕೇಂದ್ರವು ಇಂಧನದ ಮೇಲಿನ ತೆರಿಗೆಗಳ ಮೂಲಕ 20 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿತು ಮತ್ತು ತನ್ನ 'ಬಿಲಿಯನೇರ್ ಸ್ನೇಹಿತರ' ಸಾಲಮನ್ನಾ ಮಾಡಿತು. ಆದರೆ ರೈತರಿಗೆ ಒಂದು ಪೈಸೆಯನ್ನೂ ಉಳಿಸಲಿಲ್ಲ ಎಂದು ಹೇಳಿದರು.

ಕೃಷಿ ಕಾಯ್ದೆಗಳ ಕುರಿತು ಮಾತನಾಡಿದ ಅವರು, ರೈತ ವಿರೋಧಿ ಶಾಸನಗಳನ್ನು ರದ್ದುಪಡಿಸುವ ವರೆಗೂ ರೈತರ ಹಿತಕ್ಕಾಗಿ ಹೋರಾಟ ಮುಂದುವರಿಸಲಾಗುವುದು. ಸದ್ಯದ ಸರ್ಕಾರ ಅದನ್ನು ಮಾಡಲು ವಿಫಲವಾದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕಾನೂನುಗಳನ್ನು ರದ್ದುಗೊಳಿಸುತ್ತದೆ' ಎಂದು ಅವರು ಹೇಳಿದರು.

ಈ ಸರ್ಕಾರ ನೀಡಿದ್ದ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಸಾಲ ಮನ್ನಾ ಮಾಡುವುದು ಮತ್ತು ಕಬ್ಬಿನ ಬಾಕಿ ತೆರವುಗೊಳಿಸುವಂತಹ ಭರವಸೆಗಳು ಟೊಳ್ಳಾಗಿವೆ. ರೈತರಿಗೆ ಪಾವತಿಸಲು ಸರ್ಕಾರದ ಬಳಿ 15 ಸಾವಿರ ಕೋಟಿ ರೂ. ಇಲ್ಲ, ಆದರೆ 16,000 ಕೋಟಿ ರೂ.ಗಳ ಎರಡು ವಿಮಾನಗಳನ್ನು ಪ್ರಧಾನಮಂತ್ರಿಗಾಗಿ ಖರೀದಿಸಲಾಗಿದೆ. ಕಾನೂನುಗಳ ಮೂಲಕ, ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಮಂಡಿಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ದಾರಿ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT