ಕೆಂಪು ಕೋಟೆ: ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿ ಪ್ರತಿಭಟನಾಕಾರರ ಲಾಠಿ ಪ್ರಹಾರ!

ನವದೆಹಲಿ: 72ನೇ ಗಣರಾತ್ಯೋತ್ಸವದ ದಿನವೇ ದೇಶದ ರೈತರು ಟ್ರ್ಯಾಕ್ಟರ್ ರ್‍ಯಾಲಿ, ಪೆರೇಡ್ ನಡೆಸುವ ಮೂಲಕ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ದಾಖಲಿಸಿದರು. ಎರಡು ತಿಂಗಳಿಂದ ದೆಹಲಿಯ ಗಡಿ ಭಾಗಗಳಲ್ಲಿ ಬಹುತೇಕ ಶಾಂತಿಯುತವಾಗಿ ನಡೆದಿದ್ದ ಪ್ರತಿಭಟನೆ ಮಂಗಳವಾರ ನಗರ ಭಾಗದಲ್ಲಿ ಹಿಂಸಾಚಾರಕ್ಕೆ ತಿರುಗಿತು. ಮಾರ್ಗ ಬದಲಿಸಿದ ರೈತರನ್ನು ತಡೆಯಲು ಪೊಲೀಸರು ಲಾಠಿ ಬೀಸಿದರೆ, ಅಂಥದ್ದೇ ಲಾಠಿ ಹಿಡಿದು ಪೊಲೀಸರನ್ನೇ ಅಟ್ಟಾಡಿಸಿರುವ ಘಟನೆಯೂ ದಾಖಲಾಗಿದೆ.
ನಿಗದಿತ ಮಾರ್ಗ ಹೊರತು ಪಡಿಸಿ ಬೇರೆ ಕಡೆಗೆ ರೈತರ ಪೆರೇಡ್ ಸಾಗದಂತೆ ನಿಯಂತ್ರಿಸಲು ನಗರದ ಹಲವು ಭಾಗಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಬಸ್‌ಗಳು, ಸಿಮೆಂಟ್ ಬ್ಲಾಕ್‌ಗಳನ್ನೂ ಕೆಲವು ಕಡೆ ಅಡ್ಡಲಾಗಿ ತರಲಾಗಿತ್ತು. ಆದರೆ, ಕೆಲವು ಪ್ರತಿಭಟನಾ ನಿರತರು ನಿಗದಿತ ಮಾರ್ಗದಲ್ಲಿ ಸಾಗುವ ನಿಯಮಗಳನ್ನು ಉಲ್ಲಂಘಿಸಿ, ನಿರ್ಬಂಧವಿದ್ದ ರಸ್ತೆಗಳಲ್ಲಿ ಟ್ರ್ಯಾಕ್ಟರ್ ನುಗ್ಗಿಸುವ ಪ್ರಯತ್ನ ನಡೆಸಿದರು. ಇಂಥದ್ದೇ ಪ್ರಯತ್ನದಲ್ಲಿ ಬ್ಯಾರಿಕೇಡ್‌ಗಳಿಗೆ ರಭಸದಲ್ಲಿ ಡಿಕ್ಕಿಯಾದ ಟ್ರ್ಯಾಕ್ಟರ್ ಮಗುಚಿ ಬಿದ್ದು ಎಲ್ಲರ ಕಣ್ಣೆದುರಿಗೇ ರೈತರೊಬ್ಬರು ಸಾವಿಗೀಡಾದರು.
#WATCH | A protesting farmer died after a tractor rammed into barricades and overturned at ITO today: Delhi Police
CCTV Visuals: Delhi Police pic.twitter.com/nANX9USk8V
— ANI (@ANI) January 26, 2021
ಕೆಂಪು ಕೋಟೆ ಸಮೀಪ ಸೇರಿದ ಪ್ರತಿಭಟನಾ ನಿರತರಲ್ಲಿ ಕೆಲವು ಮಂದಿ ಕೋಟೆಯ ಗೋಪುರಗಳನ್ನು ಏರಿದರು. ಅನ್ಯ ಬಾವುಟಗಳನ್ನು ಹಾರಿಸಿ ಘೋಷಣೆಗಳನ್ನು ಕೂಗಿದರು. ಈ ನಡುವೆ, ಕೆಂಪು ಕೋಟೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ನಿಯೋಜನೆಯಾಗಿದ್ದ ಪೊಲೀಸರೊಂದಿಗೆ ಪ್ರತಿಭಟನಾಕಾರರು ಘರ್ಷಣೆಗೆ ಇಳಿದಿದ್ದರು. ಪೊಲೀಸರಿಗೇ ಲಾಠಿ ಬೀಸಿದ ಗುಂಪೊಂದು, ಅವರಿಗೆ ಸ್ಥಳದಿಂದ ಎಲ್ಲೂ ಹೋಗಲು ಸಾಧ್ಯವಿರದಂತೆ ಇಕ್ಕಟ್ಟಿಗೆ ಸಿಲುಕಿಸಿದರು. ಮನಸ್ಸಿಗೆ ಬಂದಂತೆ ಲಾಠಿ ಬೀಸುತ್ತಿದ್ದ ಗುಂಪು ದೊಡ್ಡದಾಗುತ್ತಿದ್ದಂತೆ ಪೊಲೀಸರು ತಪ್ಪಿಸಿಕೊಳ್ಳಲು ಎತ್ತರದ ಗೋಡೆಯಿಂದ ಕೆಳಕ್ಕೆ ಜಿಗಿದರು. ಇನ್ನೂ ಕೆಲವರು ಜಿಗಿಯಲೂ ಆಗದೆ, ಹೊಡೆತದಿಂದ ತಪ್ಪಿಸಿಕೊಳ್ಳಲು ಆಗದ ಸ್ಥಿತಿಯಲ್ಲಿ ಸಿಲುಕಿದರು. ಹೇಗೋ ಗೇಟ್ ತೆರೆದ ಪೊಲೀಸ್ ಸಿಬ್ಬಂದಿ ಅಲ್ಲಿಂದ ಮುಂದೆ ಓಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.
#WATCH | Delhi: Protestors attacked Police at Red Fort, earlier today. #FarmersProtest pic.twitter.com/LRut8z5KSC
— ANI (@ANI) January 26, 2021
ನಗರದ ಮತ್ತೊಂದು ಕಡೆ ರಭಸವಾಗಿ ಟ್ರ್ಯಾಕ್ಟರ್ ಓಡಿಸುತ್ತ ಪೊಲೀಸರನ್ನು ಚದುರಿಸುವ ಪ್ರಯತ್ನವೂ ದಾಖಲಾಗಿದೆ. ಇಂಥ ಘಟನೆಗಳು ಹಲವು ಭಾಗಗಳಲ್ಲಿ ನಡೆದಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಪ್ರತಿಭಟನೆ ಗಲಾಟೆ ರೂಪ ಪಡೆದಿದ್ದರಿಂದ ಕೆಂಪು ಕೋಟಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಲಾವಿದರು ಹಾಗೂ ಮಕ್ಕಳು ಸೇರಿದಂತೆ ಸುಮಾರು 300 ಜನರು ಅಲ್ಲಿಯೇ ಸಿಲುಕಿದ್ದರು.
ಇದನ್ನೂ ಓದಿ: ಶಾಂತಿಯುತ ಪ್ರತಿಭಟನೆಯೊಳಗೆ ನುಸುಳಿದ ಸಮಾಜಘಾತುಕರು: ರೈತರ ಒಕ್ಕೂಟ ಆರೋಪ
#WATCH | Farmers break police barricades at Peeragarhi Chowk and move towards Punjab Bagh in Delhi. pic.twitter.com/H2VqOKTaqh
— ANI (@ANI) January 26, 2021
ಇನ್ನಷ್ಟು ಓದು
ಟ್ರ್ಯಾಕ್ಟರ್ ಮಗುಚಿ ಒಬ್ಬ ರೈತ ಸಾವು; ದೆಹಲಿಯ ಹಲವೆಡೆ ಇಂಟರ್ನೆಟ್ ಸ್ಥಗಿತ
ದೆಹಲಿಯಲ್ಲಿ ರೈತರು–ಪೊಲೀಸರ ಘರ್ಷಣೆ: ಕೆಂಪುಕೋಟೆ ಮೇಲೆ ಅನ್ಯ ಧ್ವಜ ಹಾರಿಸಿದ ರೈತರು
ರೈತರ ಪ್ರತಿಭಟನೆಯಲ್ಲಿ ಮೊಳಗಿತು ‘ಜೈ ಜವಾನ್ ಜೈ ಕಿಸಾನ್‘
#WATCH: Security personnel resort to lathicharge to push back the protesting farmers, in Nangloi area of Delhi. Tear gas shells also used.#FarmLaws pic.twitter.com/3gNjRvMq61
— ANI (@ANI) January 26, 2021
Around 200 artists of Republic Day parade were stranded since around 12 noon near Red Fort due to the tractor rally have now been rescued by Delhi Police. pic.twitter.com/S1o1L87gNa
— ANI (@ANI) January 26, 2021
ಇವುಗಳನ್ನೂ ಓದಿ
ಹಿಂಸಾಚಾರ ನಡೆಸಿದ್ದು ಯಾರು? ಸಾಮಾಜಿಕ ತಾಣಗಳಲ್ಲಿ ಚರ್ಚೆ
ಚಳವಳಿ ಕೆಡಿಸಲು ಸಮಾಜಘಾತುಕರ ಪಿತೂರಿ: ರೈತ ಸಂಘಟನೆಗಳ ಆಕ್ರೋಶ
ದೆಹಲಿ ಹಿಂಸಾಚಾರ| ವಿರೋಧ ಪಕ್ಷಗಳಲ್ಲಿ ತಳಮಳ
ಕೆಂಪು ಕೋಟೆ: ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿ ಪ್ರತಿಭಟನಾಕಾರರ ಲಾಠಿ ಪ್ರಹಾರ!
ದೆಹಲಿ ಹಿಂಸಾಚಾರದಲ್ಲಿ 86 ಪೊಲೀಸ್ ಸಿಬ್ಬಂದಿಗೆ ಗಾಯ
ಕೆಂಪುಕೋಟೆಯಲ್ಲಿ ನಡೆದ ಘಟನೆ ವಿಷಾದಕರ: ಆರ್ಎಸ್ಎಸ್
ಟ್ರ್ಯಾಕ್ಟರ್ ಮಗುಚಿ ಒಬ್ಬ ರೈತ ಸಾವು; ದೆಹಲಿಯ ಹಲವೆಡೆ ಇಂಟರ್ನೆಟ್ ಸ್ಥಗಿತ
ದೆಹಲಿ ಕೆಂಪುಕೋಟೆ ಪ್ರವೇಶಿಸಿದ ರೈತರು, ಕೋಟೆ ಮೇಲೆ ಧ್ವಜಾರೋಹಣ
Video: ಬೆಂಗಳೂರಿನತ್ತ ನೂರಾರು ಟ್ರಾಕ್ಟರ್ನಲ್ಲಿ ಆಗಮಿಸುತ್ತಿರುವ ರೈತರು
Photos: ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದ ರೈತರ ಪ್ರತಿಭಟನೆ
ಚಿತ್ರಗಳಲ್ಲಿ ನೋಡಿ: ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದ ರೈತರ ಪ್ರತಿಭಟನೆ...
VIDEO: ಬೆಂಗಳೂರಲ್ಲಿ ನೃತ್ಯ ಮಾಡಿ ರೈತರ ಪ್ರತಿಭಟನೆ
ಸಿಂಘು, ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್ ಮುರಿದ ಪ್ರತಿಭಟನಾನಿರತ ರೈತರು
ಟ್ರ್ಯಾಕ್ಟರ್ ರ್‍ಯಾಲಿ| ಕೆಂಪುಕೋಟೆಗೆ ರೈತರ ಲಗ್ಗೆ: ಹಿಂಸೆಗೆ ತಿರುಗಿದ ಹೋರಾಟ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.