ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹16 ಕೋಟಿ ಮೊತ್ತದ ಇಂಜೆಕ್ಷನ್‌ ಪಡೆದರೂ ಬದುಕುಳಿಯದ ಬಾಲಕಿ

Last Updated 2 ಆಗಸ್ಟ್ 2021, 22:39 IST
ಅಕ್ಷರ ಗಾತ್ರ

ಪುಣೆ: ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಒಂದು ವರ್ಷದ ಬಾಲಕಿಯ ಚಿಕಿತ್ಸೆಗೆ ನೆರವಿನ ಮಹಾಪೂರವೇ ಹರಿದು ಬಂದಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ವೇದಿಕಾ ಶಿಂಧೆ ಭಾನುವಾರ ಸಂಜೆ ಸಾವಿಗೀಡಾಗಿದ್ದಾಳೆ. ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ (ಎಸ್‌ಎಂಎ) ಬಳಲುತ್ತಿದ್ದ ಈ ಬಾಲಕಿಗೆ ₹16 ಕೋಟಿ ಮೊತ್ತದ ಇಂಜೆಕ್ಷನ್‌ ಅನ್ನು ಜೂನ್‌ ತಿಂಗಳಲ್ಲಿ ನೀಡಲಾಗಿತ್ತು.

ಬಾಲಕಿಯ ಅಪರೂಪದ ಕಾಯಿಲೆ ಮತ್ತು ಚಿಕಿತ್ಸೆಗೆ ಅಗತ್ಯವಿದ್ದ ನೆರವು ನೀಡುವ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಪರಿಣಾಮ ಬೀರಿತ್ತು. ಇದರಿಂದಾಗಿ, ನೆಟ್ಟಿಗರು ಮತ್ತು ಇತರರು ₹14 ಕೋಟಿ ದೇಣಿಗೆ ನೀಡಿದ್ದರು. ಬಳಿಕ, ಜೂನ್‌ ತಿಂಗಳಲ್ಲಿ ಇಲ್ಲಿನ ದೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಇಂಜೆಕ್ಷನ್ ನೀಡಲಾಗಿತ್ತು.

‘ವೇದಿಕಾ ಆರೋಗ್ಯ ಸ್ಥಿತಿ ಇತ್ತೀಚೆಗೆ ಸುಧಾರಿಸಿತ್ತು. ಅವಳು ಬದುಕುಳಿಯುವ ಆಶಾಭಾವವೂ ಇತ್ತು. ಆದರೆ, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT