ಶನಿವಾರ, ಜನವರಿ 28, 2023
15 °C

ರಾಹುಲ್‌ರನ್ನು ತಬ್ಬಿದ ಆದಿತ್ಯ ಠಾಕ್ರೆಗೆ ಗೋಮೂತ್ರ ಸ್ನಾನ ಮಾಡಿಸಬೇಕು: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ತಬ್ಬಿಕೊಂಡ ಆದಿತ್ಯ ಠಾಕ್ರೆ ಅವರನ್ನು ಗೋಮೂತ್ರದಿಂದ ‌ಶುದ್ಧೀಕರಣ ಮಾಡಬೇಕು ಎಂದು ಮಹಾರಾಷ್ಟ್ರದ ಆಡಳಿತರೂಢ ಬಿಜೆಪಿ ಹಾಗೂ ಬಾಳಾಸಾಹೇಬಾಂಚಿ ಶಿವಸೇನಾ‌ ಆಗ್ರಹಿಸಿದೆ.

‘ಸಾರ್ವಕರ್‌ ಬ್ರಿಟೀಷರೊಂದಿಗೆ ಕ್ಷಮಾಪಣೆ ಕೇಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದರು‘ ಎಂದು ರಾಹುಲ್‌ ಗಾಂಧಿ ಹೇಳಿದ ಬೆನ್ನಲ್ಲೇ ಆಡಳಿತರೂಢ ಪಕ್ಷಗಳಿಂದ ಈ ಹೇಳಿಕೆ ಹೊರಬಿದ್ದಿದೆ.

‘ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್‌ ಅವರನ್ನು ಟೀಕೆ ಮಾಡಿದ ರಾಹುಲ್‌ ಗಾಂಧಿಯನ್ನು, ಆದಿತ್ಯ ಠಾಕ್ರೆ ಆಲಿಂಗಿಸಿದ್ದಾರೆ. ಹೀಗಾಗಿ ಅವರಗೆ ಗೋಮೂತ್ರ ಸಿಂಪಡಸಬೇಕು. ಅಥವಾ ಪೂರ್ಣ ಪ್ರಮಾಣದ ಗೋಮೂತ್ರ ಸ್ನಾನ ಮಾಡಿಸಬೇಕು‘ ಎಂದು ವಾಗ್ದಾಳಿ ನಡೆಸಿದ್ದಾರೆ.

‘ವೀರ ಸಾವರ್ಕರ್ ಅವರನ್ನು ನಿಂದಿಸುವವರೊಂದಿಗೆ ತಾನು ಹೋಗುತ್ತಿದ್ದೇನೆ ಎಂದು ಆದಿತ್ಯ ಅವರಿಗೆ ತಿಳಿದಿರಲಿಲ್ಲವೇ? ಇದು ಬಾಳಾಸಾಹೇಬ್‌ ಠಾಕ್ರೆ ಅವರ ಹಿಂದುತ್ವದ ಸಿದ್ಧಾಂತದ ಸೋಲು. ಆದಿತ್ಯಗೆ ಬಾಳಾಸಾಹೇಬರ ಆಶೀರ್ವಾದ ಸಿಗುವುದಿಲ್ಲ‘ ಎಂದು ಬಿಜೆಪಿಯ ಕೇಂದ್ರ ಸಚಿವ ರಾವ್‌ಸಾಹೇಬ್‌ ದಾವ್ನೆ ಹೇಳಿದ್ದಾರೆ.

ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಆದಿತ್ಯ ಅವರನ್ನು ಗೋಮೂತ್ರ ಹಾಕಿ ತಿಕ್ಕಿ ಶುದ್ದೀಕರಣ ಮಾಡಬೇಕು ಎಂದು ಬಾಳಾಸಾಹೇಬಾಂಚಿ ಶಿವಸೇನೆಯ ದೀಪಕರ್‌ ಕೇಸರ್‌ಕರ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು