ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಬಿಕ್ಕಟ್ಟು ಕುರಿತು ಹೇಳಿಕೆ: ರಾಹುಲ್‌ಗೆ ‘ನಕಲಿ ಜ್ಯೋತಿಷಿ’ ಎಂದ ಜೋಶಿ

Last Updated 30 ಏಪ್ರಿಲ್ 2022, 11:22 IST
ಅಕ್ಷರ ಗಾತ್ರ

ನವದೆಹಲಿ: ಕಲ್ಲಿದ್ದಲು ಬಿಕ್ಕಟ್ಟಿನ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ‘ನಕಲಿ ಜ್ಯೋತಿಷಿ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿರುವ ಅವರು, ‘ಭಾರತದಾದ್ಯಂತ ಕಲ್ಲಿದ್ದಲು ಸಾಗಣೆಯನ್ನು ತ್ವರಿತಗೊಳಿಸಲು ಕಲ್ಲಿದ್ದಲು, ವಿದ್ಯುತ್ ಮತ್ತು ರೈಲ್ವೆ ಸಚಿವಾಲಯಗಳು ಕೆಲಸ ಮಾಡುತ್ತಿವೆ’ ಎಂದು ಹೇಳಿದ್ದಾರೆ.

‘ಇಂದು ನಾವು 818 ಮಿಲಿಯನ್ ಟನ್ ಕಲ್ಲಿದ್ದಲನ್ನು ಪೂರೈಸುತ್ತಿದ್ದೇವೆ. ರಾಹುಲ್ ಗಾಂಧಿ ಸತ್ಯವನ್ನು ತಿಳಿಯದೇ ಮಾತನಾಡುತ್ತಲೇ ಇದ್ದಾರೆ. ಅವರೊಬ್ಬ ನಕಲಿ ಜ್ಯೋತಿಷಿ’ ಎಂದು ಜೋಶಿ ಟೀಕಿಸಿದ್ದಾರೆ.

'ರಾಷ್ಟ್ರದಲ್ಲಿ 8 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಉಳಿದಿದೆ. ಇದು ಕಳೆದ 8 ವರ್ಷಗಳಲ್ಲಿ ಆಡಿದ ದೊಡ್ಡ ಮಾತುಗಳ ಫಲಿತಾಂಶವಾಗಿದೆ. ಮೋದಿ ಅವರೇ, ಹಣದುಬ್ಬರವು ಭೀತಿಯನ್ನು ಹುಟ್ಟುಹಾಕಿದೆ. ವಿದ್ಯುತ್‌ ಕಡಿತವು ಸಣ್ಣ ಕಾರ್ಖಾನೆಗಳನ್ನು ನಾಶ ಮಾಡಲಿದೆ. ಇದು ಹೆಚ್ಚಿನ ಉದ್ಯೋಗ ನಷ್ಟಕ್ಕೆ ದಾರಿ ಮಾಡಿಕೊಡಲಿದೆ' ಎಂದು ರಾಹುಲ್‌ ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT