ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಹೀರಾತಿಗೆ ಕೋಟಿಗಟ್ಟಲೆ ಖರ್ಚು ಮಾಡುವ ಸರ್ಕಾರದ ಬಳಿ ದುಡ್ಡಿಲ್ಲ: ರಾಹುಲ್

ಅಕ್ಷರ ಗಾತ್ರ

ನವದೆಹಲಿ: ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ರೈಲ್ವೆ ಇಲಾಖೆ ನಿಲ್ಲಿಸಿರುವುದಕ್ಕೆ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಜಾಹೀರಾತು, ಉದ್ಯಮಿ ಮಿತ್ರರಿಗಾಗಿ ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡುವ ಸರ್ಕಾರದ ಬಳಿ ಹಿರಿಯ ನಾಗರಿಕರಿಗಾಗಿ ದುಡ್ಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಜಾಹೀರಾತಿಗಾಗಿ ₹911 ಕೋಟಿ ವ್ಯಯಿಸಲಾಗಿದೆ. ಹೊಸ ವಿಮಾನ ಖರೀದಿಗಾಗಿ ₹8,400 ಕೋಟಿ ಖರ್ಚು ಮಾಡಲಾಗಿದೆ. ಉದ್ಯಮಿ ಸ್ನೇಹಿತರಿಗೆ ತೆರಿಗೆಯಲ್ಲಿ ₹1,45,000 ಕೋಟಿ/ಸಾಲ ವಿನಾಯಿತಿ ನೀಡಲಾಗಿದೆ. ಆದರೆ ಸರ್ಕಾರದ ಬಳಿ ಹಿರಿಯ ನಾಗರಿಕರ ರೈಲು ಟಿಕೆಟ್‌ನಲ್ಲಿ ವಿನಾಯಿತಿ ನೀಡಲು ಬೇಕಾಗಿರುವ ₹1500 ಕೋಟಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಉದ್ಯಮಿ ಮಿತ್ರರಿಗಾಗಿ ಬೇಕಿದ್ದರೆ ನಕ್ಷತ್ರವನ್ನೇ ಕಿತ್ತು ತರುತ್ತಾರೆ. ಆದರೆ ನಾಗರಿಕರು ಚಿಲ್ಲರೆ ಕಾಸಿಗಾಗಿ ಪರಿತಪಿಸುವಂತೆ ಮಾಡುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT