ಅಯೋಧ್ಯೆ: ವಿಶ್ವ ಭೂಪಟದಲ್ಲಿಅಯೋಧ್ಯೆಗೆ ವಿಶೇಷ ಸ್ಥಾನ ದೊರಕಿಸಿಕೊಡುವಲ್ಲಿ ರೈಲ್ವೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಯೋಗಿ, ʼಜಾಗತಿಕ ಭೂಪಟದಲ್ಲಿ ಅಯೋಧ್ಯೆಗೆ ಸ್ಥಾನ ಸಿಗುವಲ್ಲಿ ರೈಲ್ವೆ ಪ್ರಮುಖ ಪಾತ್ರವಹಿಸಿದೆ. ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನಾ ಜಾರ್ದೋಷ್ ಅವರು ಇಲ್ಲಿಗೆ ಆಗಮಿಸಿರುವುದರಿಂದ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳು ವೇಗ ಪಡೆದುಕೊಳ್ಳಲುಮತ್ತು ಅಯೋಧ್ಯೆಯ ಅಭಿವೃದ್ಧಿಕಾರ್ಯಗಳು ಮುಂದುವರಿಯಲು ನೆರವಾಗಲಿದೆʼ ಎಂದಿದ್ದಾರೆ.

ಮುಂದುವರಿದು, ʼಐದು ಶತಮಾನಗಳ ಸುದೀರ್ಘ ಕಾಯುವಿಕೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಸಹಾನುಭೂತಿ ಮತ್ತುಶ್ರಮದಿಂದಾಗಿ ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಉಪಸ್ಥಿತಿಯಲ್ಲಿ ಇಂದು ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಗವಾನ್ ರಾಮನಿಲ್ಲದೆ ಅಯೋಧ್ಯೆಯು ಏನೂ ಅಲ್ಲ: ರಾಷ್ಟ್ರಪತಿ ರಾಮನಾಥ್ ಕೋವಿಂದ್

ಇದಕ್ಕೂ ಮೊದಲು ರಾಮಾಯಣ ಕಥನವನ್ನು ಬಿಡುಗಡೆ ಮಾಡಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್, ಉತ್ತರ ಪ್ರದೇಶ ಸರ್ಕಾರವು ರಾಮಾಯಣವನ್ನು ಕಲೆ ಮತ್ತು ಸಂಸ್ಕೃತಿಯ ಮೂಲಕ ಸಾಮಾನ್ಯ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕೋವಿಂದ್ ಅವರುಆಗಸ್ಟ್26ರಿಂದ ನಾಲ್ಕು ದಿನಗಳ ಭೇಟಿಗಾಗಿ ಉತ್ತರ ಪ್ರದೇಶಕ್ಕೆಆಗಮಿಸಿದ್ದಾರೆ. ಗೋರಖಪುರದಲ್ಲಿ ಮಹಾಯೋಗಿ ಗೋರಖನಾಥ್ ವಿಶ್ವವಿದ್ಯಾಲಯವನ್ನು ಶನಿವಾರ ಉದ್ಘಾಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.