ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಕೌಶಲ ವಿಕಾಸ ಯೋಜನೆಗೆ ಚಾಲನೆ; 50,000 ಅಭ್ಯರ್ಥಿಗಳಿಗೆ ತರಬೇತಿ

Last Updated 17 ಸೆಪ್ಟೆಂಬರ್ 2021, 10:48 IST
ಅಕ್ಷರ ಗಾತ್ರ

ನವದೆಹಲಿ: ‘ರೈಲು ಕೌಶಲ ವಿಕಾಸ ಯೋಜನೆ’ಯಡಿ (ಆರ್‌ಕೆವಿವೈ) ಮುಂದಿನ ಮೂರು ವರ್ಷಗಳಲ್ಲಿ 18 ರಿಂದ 35 ವರ್ಷದೊಳಗಿನ 50,000 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಈ ಯೋಜನೆಗೆ ಶುಕ್ರವಾರ ಚಾಲನೆ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಈ ಯೋಜನೆಯಡಿ ಅಭ್ಯರ್ಥಿಗಳಿಗೆ ರೈಲ್ವೆ ತರಬೇತಿ ಸಂಸ್ಥೆಗಳಲ್ಲಿ ಉದ್ಯಮ ಸಂಬಂಧಿತ ಕೌಶಲಗಳ ತರಬೇತಿ ನೀಡಲಾಗುವುದು ಎಂದರು.

‘ಆತ್ಮನಿರ್ಭರ ಭಾರತಕ್ಕೆ ಆರ್‌ಕೆವಿವೈ ಕೊಡುಗೆಯಾಗಿದೆ. ಅಲ್ಲದೆ, ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸರಣಿ ಯೋಜನೆಗಳ ಭಾಗವೂ ಆಗಿದೆ. ಎಲೆಕ್ಟ್ರಾನಿಕ್ಸ್‌ನ ಯುಗದಲ್ಲಿ ಈ ಕೌಶಲಗಳು ಹೆಚ್ಚು ಪ್ರಸ್ತುತವಾಗಿವೆ. ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲೂ ಲಭ್ಯವಾಗಲಿದೆ’ ಎಂದು ತಿಳಿಸಿದರು.

ಎಲೆಕ್ಟ್ರಿಷಿಯನ್, ವೆಲ್ಡರ್, ಮೆಷಿನಿಸ್ಟ್ ಮತ್ತು ಫಿಟ್ಟರ್‌ ವಿಭಾಗಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ . ಈ ಯೋಜನೆಯಡಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ 75 ರೈಲ್ವೆ ತರಬೇತಿ ಸಂಸ್ಥೆಗಳಲ್ಲಿ 100 ಗಂಟೆಗಳ ತರಬೇತಿ ದೊರೆಯಲಿದೆ.

ಪಾರದರ್ಶಕ ಕಾರ್ಯವಿಧಾನಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ನಡೆಯಲಿದೆ. ಕಾರ್ಯಕ್ರಮದ ಪಠ್ಯಕ್ರಮವನ್ನು ಬನಾರಸ್ ಲೋಕೋಮೋಟಿವ್ ವರ್ಕ್ಸ್ ಅಭಿವೃದ್ಧಿಪಡಿಸಿದೆ.

‘ಯೋಜನೆಯ ಆರಂಭದಲ್ಲಿ 1,000 ಅಭ್ಯರ್ಥಿಗಳನ್ನು ಆರಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ 50,000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದ್ದೇವೆ’ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT