ಬೆಂಗಳೂರು: ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗುವ ‘ತಪಸ್’ (ವಿದ್ಯಾರ್ಥಿಗಳಿಗೆ) ಹಾಗೂ ‘ಸಾಧನಾ’ (ವಿದ್ಯಾರ್ಥಿನಿಯರಿಗೆ) ಯೋಜನೆಗಳಡಿ ರಾಷ್ಟ್ರೋತ್ಥಾನ ಪರಿಷತ್ ಅರ್ಜಿ ಆಹ್ವಾನಿಸಿದೆ

‘ತಪಸ್’ ಯೋಜನೆಯಡಿ ಗಂಡು ಮಕ್ಕಳಿಗೆ ಪಿಯುಸಿ ಹಾಗೂ ಐಐಟಿ-ಜೆಇಇ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ‘ಸಾಧನಾ’ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಪಿಯುಸಿ ಜತೆಗೆ ಎನ್ಇಇಟಿ, ಸಿಇಟಿ, ಕೆವಿಪಿವೈ ಮುಂತಾದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಸ್ತುತ 10ನೇ ತರಗತಿ ಓದುತ್ತಿರುವವರಾಗಿರಬೇಕು. 9ನೇ ತರಗತಿಯಲ್ಲಿ ಶೇ 80ಕ್ಕೂ ಅಧಿಕ ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ₹ 2 ಲಕ್ಷ ಮೀರಿರಬಾರದು. ಅರ್ಜಿಗಳನ್ನು www.tapassaadhana.orgನಲ್ಲಿ 2021 ಜ.10ರೊಳಗೆ ಸಲ್ಲಿಸಬೇಕು. ಜ.31ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಬಳಿಕ ಸಂದರ್ಶನ ನಡೆಯಲಿದೆ.

ಸಂಪರ್ಕ: 9481201144

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.