ಬುಧವಾರ, ಜೂನ್ 29, 2022
24 °C

ರಾಷ್ಟ್ರಪತಿ ಚುನಾವಣೆ: ದ್ರೌಪದಿ ಅವರಿಗೆ ಬಿಜೆಡಿ ಬೆಂಬಲ, ಗೆಲುವಿನ ಹಾದಿ ಸುಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾದ ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಆಡಳಿತಾರೂಢ ಬಿಜೆಡಿ ಪಕ್ಷ ಬೆಂಬಲ ಸೂಚಿಸಿದೆ. ಇದರಿಂದ ಮುರ್ಮು ಅವರ ಗೆಲುವಿನ ಹಾದಿ ಸುಗಮವಾಗಿದೆ. 

‘ಒಡಿಶಾದ ವಿಧಾನಸಭೆಯ ಎಲ್ಲ ಸದಸ್ಯರು ಪಕ್ಷಭೇದ ಮರೆತು ಒಡಿಶಾದ ಮಗಳಾದ ಮುರ್ಮು ಅವರಿಗೆ ಮತ ನೀಡುವುದರ ಮೂಲಕ ಬೆಂಬಲಿಸಿ’ ಎಂದು ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಟ್ವೀಟ್‌ ಮೂಲಕ ಕರೆ ನೀಡಿದ್ದಾರೆ. 

ಯುಪಿಎ ಅಥವಾ ಎನ್‌ಡಿಎ ಕೂಟದಲ್ಲಿ ಇಲ್ಲದ ಕೆಲವೇ ಪಕ್ಷಗಳಲ್ಲಿ ಬಿಜೆಡಿ ಕೂಡ ಒಂದು. 2009ರಲ್ಲಿ ಎನ್‌ಡಿಎಯಿಂದ ಬಿಜೆಡಿ ಹೊರಬಂದಿತ್ತು. ಬಿಜೆಡಿ ಎಲೆಕ್ಟೋರಲ್‌ ಕಾಲೇಜ್‌ನಲ್ಲಿ ಶೇ 2.85ರಷ್ಟು ಮತಗಳ ಪಾಲನ್ನು ಹೊಂದಿದೆ. ಬಿಜೆಪಿಯು ಪ್ರಸ್ತುತ ಎಲೆಕ್ಟೋರಲ್‌ ಕಾಲೇಜ್‌ನಲ್ಲಿ ಶೇ 49ರಷ್ಟು ಮತಗಳನ್ನು ಹೊಂದಿದ್ದು, ಗೆಲ್ಲಲು ಶೇ 50ರಷ್ಟು ಮತಗಳು ಬೇಕಿವೆ. ಬಿಜೆಡಿ ಬೆಂಬಲದಿಂದ ಬಿಜೆಪಿಗೆ ಗೆಲುವಿನ ಹಾದಿ ಸುಲಭವಾಗುತ್ತದೆ.  

ಜೆಡಿಯು, ಹಿಂದೂಸ್ತಾನಿ ಅವಾಮ್‌ ಮೋರ್ಚಾ ಮತ್ತು ಲೋಕಜನಶಕ್ತಿ– ರಾಮ್‌ ವಿಲಾಸ್‌ ಬಣ (ಎಲ್‌ಜೆಪಿ) ಕೂಡ ಮುರ್ಮು ಅವರಿಗೆ ಬೆಂಬಲ ಸೂಚಿಸಿವೆ.  ಜೆಡಿಯು 45 ಶಾಸಕರು, 16 ಲೋಕಸಭಾ ಸದಸ್ಯರು ಮತ್ತು  ಐವರು ರಾಜ್ಯಸಭಾ ಸದಸ್ಯರನ್ನು ಹೊಂದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು