ಶುಕ್ರವಾರ, ಅಕ್ಟೋಬರ್ 23, 2020
21 °C
ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಪತ್ತೆ

‘ಕೋವಿಡ್‌–19 ಚಿಕಿತ್ಸೆಯಲ್ಲಿ ರೆಮ್ಡಿಸಿವಿರ್‌ ನೆರವು ಅತ್ಯಲ್ಪ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌-19 ರೋಗಿಗಳ ಚಿಕಿತ್ಸೆಯಲ್ಲಿ ನೆರವಾಗಬಹುದು ಎಂದು ಭಾವಿಸಲಾಗಿದ್ದ ನಾಲ್ಕು ಪ್ರಮುಖ ಔಷಧಗಳಿಂದ ಮರಣ ಪ್ರಮಾಣ ಕಡಿಮೆಯಾಗಿಲ್ಲ ಎಂದು ಅಧ್ಯಯನ ವರದಿ ಹೇಳಿದೆ. ರೆಮ್ಡಿಸಿವಿರ್, ಎಚ್‌ಸಿಕ್ಯು, ಲೊಪಿನ್ಯಾವಿರ್ ಮತ್ತು ಇಂಟರ್‌ಫೆರಾನ್‌ ಔಷಧಗಳು ಕೋವಿಡ್‌ ರೋಗಿಗಳ ಮೇಲೆ ಬಿರುವ ಪರಿಣಾಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ್ದ ಅಧ್ಯಯನದಲ್ಲಿ ಈ ಅಂಶ ಪತ್ತೆಯಾಗಿದೆ.

ಇವು ಬೇರೆ-ಬೇರೆ ಕಾಯಿಲೆಗಳನ್ನು ಗುಣಪಡಿಸಲು ಅಭಿವೃದ್ಧಿಪಡಿಸಿದ್ದ ಔಷಧಗಳಾಗಿವೆ. ಕೋವಿಡ್‌ ಚಿಕಿತ್ಸೆಯಲ್ಲಿ ನೆರವಾಗಬಹುದು ಎಂದು ಇವನ್ನು ಕೋವಿಡ್ ರೋಗಿಗಳಿಗೆ ನೀಡಲಾಗುತ್ತಿತ್ತು. ರೆಮ್ಡಿಸಿವಿರ್‌ ಮತ್ತು ಎಚ್‌ಸಿಕ್ಯು ಔಷಧಗಳು, ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್‌ ರೋಗಿಗಳಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಈ ಮೊದಲು ನಿರೀಕ್ಷಿಸಲಾಗಿತ್ತು. ಜಗತ್ತಿನ ಎಲ್ಲೆಡೆ ಈ ಔಷಧಗಳನ್ನು ಕೋವಿಡ್‌ ರೋಗಿಗಳಿಗೆ ನೀಡಲಾಗುತ್ತಿತ್ತು. ಈ ಎರಡೂ ಔಷಧಗಳು ಸೇರಿದಂತೆ ಒಟ್ಟು ನಾಲ್ಕು ಔಷಧಗಳ ಮೇಲೆ ಅಧ್ಯಯನ ನಡೆಸಲಾಗಿತ್ತು.

ಭಾರತವೂ ಸೇರಿ 30 ದೇಶಗಳಲ್ಲಿ ಈ ಅಧ್ಯಯನ ನಡೆಸಲಾಗಿತ್ತು. ಯಾವುದೇ ರೀತಿಯ ಉಪಯೋಗ ಇಲ್ಲದ ಕಾರಣ ಎಚ್‌ಸಿಕ್ಯು ಮತ್ತು ಲೊಪಿನ್ಯಾವಿರ್‌ ಔಷಧಗಳ ಬಳಕೆಯನ್ನು ಅದ್ಯಯನದ ಮಧ್ಯದಲ್ಲೇ ನಿಲ್ಲಿಸಲಾಗಿತ್ತು. ಅಧ್ಯಯನ ಪೂರ್ಣವಾದ ನಂತರ ಉಳಿದ ಎರಡು ಔಷಧಗಳಿಂದಲೂ ಯಾವುದೇ ಉಪಯೋಗವಿಲ್ಲ ಎಂಬುದು ಪತ್ತೆಯಾಗಿದೆ.

‘ಈ ಔಷಧಗಳು ಕೋವಿಡ್‌ ರೋಗಿಗಗಳ ಮರಣ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ. ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ವೆಂಟಿಲೇಟರ್‌ ಅಗತ್ಯವನ್ನು ಕಡಿಮೆ ಮಾಡುವಲ್ಲೂ ಇವು ನೆರವಾಗುವುದಿಲ್ಲ. ರೆಮ್ಡಿಸಿವಿರ್‌ನ ಉಪಯೋಗ ಅತ್ಯಲ್ಪ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ್ ಹೇಳಿದ್ದಾರೆ.

ಅಧ್ಯಯನದ ವ್ಯಾಪ್ತಿ

30ದೇಶ
405ಆಸ್ಪತ್ರೆ
11,266ರೋಗಿಗಳ ಸಂಖ್ಯೆ
2,750ರೆಮ್ಡಿಸಿವಿರ್ ಪಡೆದ ರೋಗಿಗಳು
954ಎಚ್‌ಸಿಕ್ಯು ಪಡೆದ ರೋಗಿಗಳು
1,411ಲೊಪಿನ್ಯಾವಿರ್ ಪಡೆದ ರೋಗಿಗಳು
651ಇಂಟರ್‌ಫೆರಾನ್+ಲೊಪಿನ್ಯಾವಿರ್ ಪಡೆದ ರೋಗಿಗಳು
1,412ಇಂಟರ್‌ಫೆರಾನ್ ಪಡೆದ ರೋಗಿಗಳು
4,0884,088 ಈ ಯಾವುದೇ ಔಷಧ ಪಡೆಯದ ರೋಗಿಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು