ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾ ಚಕ್ರವರ್ತಿ ಸೋದರನ ಬಂಧನ: ಅಭಿನಂದನೆಗಳು ಭಾರತ ಎಂದ ಇಂದ್ರಜಿತ್ ಚಕ್ರವರ್ತಿ 

Last Updated 6 ಸೆಪ್ಟೆಂಬರ್ 2020, 10:30 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್ ಡ್ರಗ್ ಮಾಫಿಯಾ ಜಾಲಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಸಹೋದರ ಶೋವಿಕ್‌ ಚಕ್ರವರ್ತಿ ಅವರನ್ನು ಶುಕ್ರವಾರ ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಬಂಧಿಸಿದ್ದು, ರಿಯಾ ತಂದೆ ಇಂದ್ರಜಿತ್ ಚಕ್ರವರ್ತಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೆ.ಕರ್ನಲ್ (ನಿವೃತ್ತ) ಇಂದ್ರಜಿತ್ ಅವರು ಇಂಡಿಯಾ ಟುಡೆಯೊಂದಿಗೆ ಮಾತನಾಡಿ, ಅಭಿನಂದನೆಗಳು ಭಾರತ, ನೀವು ನನ್ನ ಮಗನನ್ನು ಬಂಧಿಸಿದ್ದೀರಿ, ಮುಂದಿನ ದಿನಗಳಲ್ಲಿ ಆ ಸಾಲಿನಲ್ಲಿ ನನ್ನ ಮಗಳಿದ್ದಾಳೆ ಎಂಬುದು ನನಗೆ ಖಚಿತವಾಗಿದೆ ಮತ್ತು ಅದರ ನಂತರ ಯಾರು ಎಂದು ನನಗೆ ತಿಳಿದಿಲ್ಲ. ಮಧ್ಯಮ ವರ್ಗದ ಕುಟುಂಬವನ್ನು ತುಂಬ ಪರಿಣಾಮಕಾರಿಯಾಗಿ ನೀವು ಕೆಡವಿದ್ದೀರಿ. ಆದರೆ ನ್ಯಾಯದ ಸಲುವಾಗಿ, ಎಲ್ಲವೂ ಸಮರ್ಥನೀಯವಾಗಿದೆ. ಜೈ ಹಿಂದ್' ಎಂದಿದ್ದಾರೆ.

ಶೋವಿಕ್ ಮತ್ತು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯ ಮ್ಯಾನೇಜರ್ ಆಗಿದ್ದ ಸ್ಯಾಮುಯೆಲ್ ಮಿರಾಂಡ ಅವರನ್ನು ಶುಕ್ರವಾರ ಮಾದಕವಸ್ತು ನಿಯಂತ್ರಣ ದಳ ಶುಕ್ರವಾರ ಬಂಧಿಸಿ, ಮುಂಬೈನ ಬಲ್ಲಾರ್ಡ್ಎಸ್ಟೇಟ್‌ನಲ್ಲಿರುವ ಎನ್‌ಸಿಬಿಯ ಪ್ರಾದೇಶಿಕ ಕಚೇರಿಗೆ ಕರೆದೊಯ್ಯಲಾಗಿತ್ತು.

ಎನ್‌ಸಿಬಿ ತಂಡಗಳು ಸಾಂತಾ ಕ್ರೂಜ್ (ಪಶ್ಚಿಮ) ಪ್ರದೇಶದ ಶೋವಿಕ್ ಮತ್ತು ಅಂಧೇರಿ (ಪಶ್ಚಿಮ) ಉಪನಗರ ಪ್ರದೇಶದ ಸ್ಯಾಮ್ಯುಯೆಲ್ ಮಿರಾಂಡಾ ಅವರ ನಿವಾಸಗಳಲ್ಲಿ ಶೋಧ ಕಾರ್ಯ ನಡೆಸಿವೆ.ಡ್ರಗ್ಸ್ ತನಿಖೆಗೆ ಸಂಬಂಧಿಸಿದಂತೆ ಸುಶಾಂತ್ ಅವರ ಮನೆಯ ಸಹಾಯಕ ದೀಪೇಶ್ ಸಾವಂತ್ ಅವರನ್ನು ಎನ್‌ಸಿಬಿ ಶನಿವಾರ ಬಂಧಿಸಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ಸೇವನೆ, ಸಂಗ್ರಹಣೆ, ಬಳಕೆ ಮತ್ತು ಹಣ ವರ್ಗಾವಣೆಗೆ ಸಂಬಂಧಿಸಿದ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇಡಿ) ಮಾಹಿತಿ ಲಭ್ಯವಾದ ಬಳಿಕ ತನಿಖೆಯನ್ನು ಪ್ರಾರಂಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT