ನಾಗಪುರ/ಬೆಂಗಳೂರು: ದೇಶದಲ್ಲಿನ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯವಾಗುವಂತೆ ಜನಸಂಖ್ಯಾ ನೀತಿಯನ್ನು ಜಾರಿಗೆ ತರಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ.

ನಾಗಪುರದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವದಲ್ಲಿ ಜನಸಂಖ್ಯೆಯು ಎರಡು ರೀತಿಯಲ್ಲಿ ಏರಿಕೆಯಾಗುತ್ತಿದೆ. ಒಂದು ದೇಶದ ಸಂಪನ್ಮೂಲವಾಗಿ ಬಳಕೆಯಾಗುವ ಜನಸಂಖ್ಯೆಯ ಏರಿಕೆ. ಮತ್ತೊಂದು ದೇಶಕ್ಕೆ ಹೊರೆಯಾಗುವ ಜನಸಂಖ್ಯೆ. ಎರಡನೇ ಸ್ವರೂಪದ ಜನಸಂಖ್ಯೆ ಏರಿಕೆಯಾಗುತ್ತಲೇ ಇದ್ದರೆ ಅದು ಹೊರಲಾಗದ ಹೊರೆಯಾಗುತ್ತದೆ. ಒಬ್ಬ ಮಹಿಳೆ ಎಷ್ಟು ಮಕ್ಕಳನ್ನು ಹೆತ್ತಿದ್ದಾಳೆ ಎಂಬುದು ಆಕೆಯ ಮಾನಸಿಕ ಆರೋಗ್ಯ, ಜತೆಗೆ ಆರ್ಥಿಕ ಸ್ಥಿತಿಯನ್ನೂ ಬಾಧಿಸುತ್ತದೆ. ದೇಶದ ಪರಿಸರವನ್ನೂ ಬಾಧಿಸುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಯಾವುದೇ ಕುಟುಂಬ ಏನು ಬಯಸುತ್ತದೆ ಎಂಬುದೂ ಜನಸಂಖ್ಯೆಯ ಏರಿಕೆಯ ಮೇಲೆ ಪರಿಣಾಮ ಬೀರುತ್ತದೆ.ಹೀಗಾಗಿ ರಾಷ್ಟ್ರೀಯ ಅಸ್ಮಿತೆ ಮತ್ತು ರಾಷ್ಟ್ರೀಯ ಭದ್ರತೆಗೆ ಪ್ರಸ್ತುತವಾಗುವಂತೆ ಜನಸಂಖ್ಯೆಯನ್ನು ರೂಪಿಸಿ, ರಕ್ಷಿಸಬೇಕಾಗುತ್ತದೆ. ಹೀಗಾಗಿ ಜನಸಂಖ್ಯೆಯ ನಿಯಂತ್ರಣ ನೀತಿ ಅತ್ಯಗತ್ಯ. ಆದರೆ ಜನಸಂಖ್ಯಾ ನಿಯಂತ್ರಣ ನೀತಿಯು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಸಮಾನವಾಗಿ ಅನ್ವಯವಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.