ಅರೆನಗ್ನ ಜಾಹೀರಾತು ಹಿಂಪಡೆದ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ
ಬೆಂಗಳೂರು: ಮಂಗಳಸೂತ್ರದ ಅರೆನಗ್ನ ಜಾಹೀರಾತನ್ನು ಖ್ಯಾತ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರು ಹಿಂಪಡೆದಿದ್ದಾರೆ.
ಜಾಹೀರಾತಿಗಾಗಿ ಮಹಿಳೆಯನ್ನು ಅರೆನಗ್ನವಾಗಿ ಬಿಂಬಿಸಿದ್ದಕ್ಕಾಗಿ ಸಬ್ಯಸಾಚಿ ಮುಖರ್ಜಿ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಇದನ್ನೂ ಓದಿ: ಆಭರಣದ ಜಾಹೀರಾತಿಗೆ ಅರೆಬೆತ್ತಲೇ ಮಾರ್ಗ: ಟೀಕೆಗೆ ಗುರಿಯಾದ ಖ್ಯಾತ ವಸ್ತ್ರವಿನ್ಯಾಸಕ
ಈ ಮಧ್ಯೆ, ಜಾಹೀರಾತನ್ನು ಹಿಂಪಡೆಯುವಂತೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮುಖರ್ಜಿ ಅವರಿಗೆ 24 ಗಂಟೆಗಳ ಗಡುವು ನೀಡಿದ್ದರು. ಜಾಹೀರಾತು ವಿವಾದದ ರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಎಲ್ಲ ಕಡೆಗಳಿಂದ ಹಿಂಪಡೆದಿದ್ದಾರೆ.
‘ಈ ಜಾಹೀರಾತು ಸಮಾಜದ ಭಾವನಗೆಗಳಿಗೆ ಧಕ್ಕೆ ತಂದಿದೆ. ಇದು ನಮಗೆ ತುಂಬಾ ಬೇಸರ ತರಿಸಿದೆ,’ ಎಂದು ಸಬ್ಯಸಾಚಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.