ಮಂಗಳವಾರ, ಮಾರ್ಚ್ 21, 2023
23 °C
ಟಿವಿ ಮೆಕ್ಯಾನಿಕ್‌ನ ಪುತ್ರಿಯ ಅಭೂತಪೂರ್ವ ಸಾಧನೆ

ವಾಯುಪಡೆಯ ಪೈಲಟ್‌ ಆಗಿ ಸಾನಿಯಾ ಆಯ್ಕೆ: ಮೊದಲ ಮುಸ್ಲಿಂ ವನಿತೆ ಎನ್ನುವ ಕೀರ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮಿರ್ಜಾ‍ಪುರ: ಉತ್ತರ ಪ್ರದೇಶದ ಸಾನಿಯಾ ಮಿರ್ಜಾ ಎನ್ನುವ ಯುವತಿ, ಭಾರತೀಯ ವಾಯುಸೇನೆಯ ಫೈಟರ್‌ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಭಾರತೀಯ ವಾಯುಸೇನೆಯಲ್ಲಿ ಪೈಲಟ್‌ ಆಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಮಿರ್ಜಾಪುರದ ಜಸೋವರ್‌ ನಿವಾಸಿಯಾಗಿರುವ ಸಾನಿಯಾ ಮಿರ್ಜಾ ಅವರ ತಂದೆ ಟಿವಿ ಮೆಕ್ಯಾನಿಕ್‌ ಆಗಿದ್ದಾರೆ. ಬಡತನದಲ್ಲಿ ಬೆಳೆದ ಯುವತಿಯೊಬ್ಬಳು ಇದೀಗ ಈ ಸಾಧನೆ ಮಾಡಿದ್ದು, ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಹಿಂದಿ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ಸಾನಿಯಾ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಇದೀಗ ವಾಯುಪಡೆಯ ಪೈಲಟ್‌ ತರಬೇತಿಗೆ ಆಯ್ಕೆಯಾಗಿದ್ದಾರೆ. ಪುಣೆಯ ಎನ್‌ಡಿಎ ಖಡಕ್‌ವಾಸ್ಲಾಕ್ಕೆ ಅವರು ಡಿ.27 ಕ್ಕೆ ದಾಖಲಾಗಲಿದ್ದಾರೆ. ಅಲ್ಲಿ ಅವರಿಗೆ ಪೈಲಟ್‌ ತರಬೇತಿ ನಡೆಯಲಿದೆ.

 ‘ನನ್ನ ಈ ಸಾಧನೆಯನ್ನು ತಂದೆ ತಾಯಿಗೆ ಅರ್ಪಣೆ ಮಾಡುತ್ತೇನೆ. 2022ರ ಎನ್‌ಡಿಎ ಪರೀಕ್ಷೆಯಲ್ಲಿ, ಫೈಟರ್ ಪೈಲಟ್‌ ವಿಭಾಗದಲ್ಲಿ ಮಹಿಳೆಯರಿಗೆ ಕೇವಲ 2 ಸ್ಥಾನ ಮಾತ್ರ ಇತ್ತು. ಎರಡನೇ ಪ್ರಯತ್ನದಲ್ಲಿ ನಾನು ತೇರ್ಗಡೆಯಾದೆ‘ ಎಂದು ಸಾನಿಯಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು