ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ವಕ್ತಾರ ಸಂಜಯ ರಾವುತ್‌ ಇ.ಡಿ ವಶಕ್ಕೆ

Last Updated 31 ಜುಲೈ 2022, 19:51 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾದ ವಕ್ತಾರ ಮತ್ತು ಸಂಸದ ಸಂಜಯ ರಾವುತ್ ಅವರನ್ನು ಜಾರಿ ನಿರ್ದೇಶನಾಲ
ಯದ (ಇ.ಡಿ.) ಅಧಿಕಾರಿಗಳು ಭಾನುವಾರ ತಮ್ಮ ಕಚೇರಿಗೆ ಕರೆದೊಯ್ದಿದ್ದಾರೆ. ಅದಕ್ಕೂ ಮೊದಲು, ರಾವುತ್ ಅವರ ಭಾಂಡುಪ್‌ನಲ್ಲಿರುವ ನಿವಾಸದಲ್ಲಿ ಸುಮಾರು ಒಂಬತ್ತು ತಾಸು ಶೋಧ ನಡೆಸಲಾಗಿದೆ. ರಾವುತ್‌ ಅವರನ್ನು ಮನೆಯಲ್ಲಿಯೂ ತನಿಖೆಗೆ ಒಳಪಡಿಸಲಾಗಿತ್ತು.

‘ನಕಲಿ ಸಾಕ್ಷ್ಯಗಳ ಆಧಾರ’ದಲ್ಲಿ ತಮ್ಮ ವಿರುದ್ಧ ಹುಸಿ ಪ್ರಕರಣ ದಾಖಲಿಸಲಾಗಿದೆ. ಅದಕ್ಕೆ ತಲೆಬಾಗುವ ಮತ್ತು ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಇ.ಡಿ. ಅಧಿಕಾರಿಗಳು ಕಚೇರಿಗೆ ಕರೆದೊಯ್ಯುವ ಮುನ್ನ ರಾವುತ್‌ ಹೇಳಿದ್ದರು. ‘ಅವರು ನನ್ನನ್ನು ಬಂಧಿಸುತ್ತಾರೆ, ನನ್ನನ್ನು ಜೈಲಿಗೆ ಕಳುಹಿಸುತ್ತಾರೆ’ ಎಂದು ಇ.ಡಿ. ಕಚೇರಿಯಲ್ಲಿ ಹೇಳಿದರು.

ಇ.ಡಿ. ಅಧಿಕಾರಿಗಳು ಭಾರಿ ಸಂಖ್ಯೆಯ ಪೊಲೀಸರೊಂದಿಗೆ ಬೆಳಿಗ್ಗೆ ಏಳು ಗಂಟೆಗೆ ರಾವುತ್‌ ಮನೆಗೆ ಬಂದಿದ್ದರು. ತನಿಖೆಗೆ ಹಾಜರಾಗುವಂತೆ ರಾವುತ್ ಅವರಿಗೆ ಎರಡು ನೋಟಿಸ್‌ ನೀಡಲಾಗಿತ್ತು. ಎರಡು ಬಾರಿಯೂ ವಿವಿಧ ಕಾರಣಗಳಿಂದಾಗಿ ರಾವುತ್ ಅವರು ತನಿಖೆಗೆ ಹಾಜರಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT