ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ತೀರ್ಪು: ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನೆ ಇಂದು

Last Updated 10 ಜನವರಿ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಆಧಾರ್‌ನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು 2018ರ ಸೆಪ್ಟೆಂಬರ್‌ 29ರಂದು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಸೋಮವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ.

ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌, ಮಕ್ಕಳ ಹಕ್ಕುಗಳ ಸಮಿತಿಯ ಮಾಜಿ ಅಧ್ಯಕ್ಷೆ ಶಾಂತ ಸಿನ್ಹಾ, ಎಸ್‌.ಜಿ. ಒಂಬತ್ತುಕರೆ ಮತ್ತು ಇತರರು ಅರ್ಜಿ ಸಲ್ಲಿಸಿದ್ದಾರೆ. ಜನರ ಖಾಸಗಿತನದ ಹಕ್ಕು ಮತ್ತು ವೈಯಕ್ತಿಕ ಘನತೆಯನ್ನು ಸಮತೋಲನದಲ್ಲಿ ನೋಡಲಾಗಿದೆ. ಲಕ್ಷಾಂತರ ಜನರಿಗೆ ಸೌಲಭ್ಯ ಒದಗಿಸುವ ದೊಡ್ಡ ಉದ್ದೇಶವನ್ನೂ ಆಧಾರ್‌ ಹೊಂದಿದೆ. ಆಧಾರ್‌ ಜೋಡಣೆಯು ಸೌಲಭ್ಯ ಮತ್ತು ಸಹಾಯಧನ ನೀಡಿಕೆಗೆ ಸೀಮಿತವಾಗಬೇಕು ಎಂದು2018ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.

ಆದರೆ, ಬ್ಯಾಂಕ್‌ ಖಾತೆಗಳು ಮತ್ತು ಮೊಬೈಲ್‌ ಸಂಖ್ಯೆಗಳಿಗೆ ಆಧಾರ್‌ ಜೋಡಣೆಯ ಆದೇಶವನ್ನು ರದ್ದು ಮಾಡಿತ್ತು.

ಆಧಾರ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು 4:1 ಬಹುಮತದಲ್ಲಿ ನೀಡಿದ್ದ ತೀರ್ಪಿನ ಸಮರ್ಪಕತೆಯನ್ನೇ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT