ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತಕ್ಕೆ ಅನುಮತಿ: ಅವಿವಾಹಿತೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

Last Updated 19 ಜುಲೈ 2022, 12:47 IST
ಅಕ್ಷರ ಗಾತ್ರ

ನವದೆಹಲಿ: ಅವಿವಾಹಿತ ಮಹಿಳೆಯೊಬ್ಬರು ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಮಂಗಳವಾರ ಒಪ್ಪಿಗೆ ನೀಡಿದೆ. ಒಪ್ಪಿತ ಸಂಬಂಧದ ಮೂಲಕ ಮಹಿಳೆಯು ಗರ್ಭಧರಿಸಿದ್ದರು.

ಗರ್ಭಪಾತವು ತ್ವರಿತವಾಗಿ ಆಗಬೇಕಿರುವುದರಿಂದ ನ್ಯಾಯಾಲಯವು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಹಾಗೂ ಕೃಷ್ಣ ಮುರಾರಿ ಮತ್ತು ಹಿಮಾ ಕೋಹ್ಲಿ ಅವರಿದ್ದ ಪೀಠಕ್ಕೆಮಹಿಳೆ ಪರ ವಕೀಲರು ಕೋರಿದ್ದರು.

23 ವಾರಗಳ ಗರ್ಭವತಿಯ ಅರ್ಜಿ ಕುರಿತು ಶುಕ್ರವಾರ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌, ‘ಇದು ಭ್ರೂಣ ಹತ್ಯೆಯಾಗಲಿದೆ. ಅನುಮತಿ ನೀಡಿದರೆ, 2003ರ ಗರ್ಭಪಾತ ಕಾನೂನಿನ ಉಲ್ಲಂಘನೆಯಾಗಲಿದೆ’ ಎಂದು ಅಭಿಪ್ರಾಯಪಟ್ಟಿತ್ತು.

ಅವಿವಾಹಿತೆಯು 24 ವಾರಗಳ ನಂತರ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಪಡೆಯಬೇಕು ಎನ್ನುವುದು ತಾರತಮ್ಯವಾಗಲಿದೆ ಎಂದು ಮಹಿಳೆಯು ಅರ್ಜಿಯಲ್ಲಿ ಹೇಳಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ಸೂಚಿಸಿತ್ತು.

‘ಸ್ನೇಹಿತನು ನನ್ನನ್ನು ಮದುವೆ ಆಗಲು ನಿರಾಕರಿಸಿದ. ಮದುವೆ ಆಗದೆ ತಾಯಿಯಾಗುವುದು ನನಗೆ ಮಾನಸಿಕ ಕ್ಷೋಭೆಗೆ ಕಾರಣವಾಗುತ್ತದೆ. ಸಾಮಾಜಿಕವಾಗಿ ಏಕಾಂಗಿ ಆಗುವ ಸಾಧ್ಯತೆಯೂ ಇದೆ. ಜತೆಗೆ ಈಗಲೇ ತಾಯಿಯಾಗಲು ಮಾನಸಿಕವಾಗಿ ನಾನು ಸಿದ್ಧಳಿಲ್ಲ’ ಎಂದು 25 ವರ್ಷದ ಮಹಿಳೆಯು ತನ್ನ ಅರ್ಜಿಯಲ್ಲಿ ಹೇಳಿದ್ದರು.

‘ಮಹಿಳೆಯನ್ನು ಸುರಕ್ಷಿತ ಜಾಗದಲ್ಲಿ ಇರಿಸಿ ಹೆರಿಗೆ ಮಾಡಿಸಲು ವ್ಯವಸ್ಥೆ ಮಾಡಲಾಗುವುದು. ಹೆರಿಗೆ ನಂತರ ಆಕೆಯು ಮರಳಬಹುದು. ದತ್ತು ಪಡೆಯಲು ಜನರ ದೊಡ್ಡ ಸಾಲೇ ಇದೆ’ ಎಂದು ದೆಹಲಿ ಹೈಕೋರ್ಟ್‌ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT