ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್‌ ದುರಂತ: ಇನ್ನೂ ಸಿಗದ ಬ್ಲಾಕ್‌ ಬಾಕ್ಸ್‌, ಶೋಧದ ವ್ಯಾಪ್ತಿ ವಿಸ್ತರಣೆ

Last Updated 9 ಡಿಸೆಂಬರ್ 2021, 5:44 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಕೂನೂರು ಬಳಿ ದುರಂತಕ್ಕೀಡಾದ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಅಥವಾ ‘ಫ್ಲೈಟ್ ಡೇಟಾ ರೆಕಾರ್ಡರ್‌’ಗಾಗಿ ಗುರುವಾರವೂ ಶೋಧ ಮುಂದುವರೆದಿದೆ.

ಮೂಲಗಳ ಪ್ರಕಾರ, ಹುಡುಕಾಟದ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಹೆಲಿಕಾಪ್ಟರ್‌ ಪತನವಾದ ಸ್ಥಳದ ಸುತ್ತ ಮುತ್ತಲ 300 ಮೀಟರ್‌ ವರೆಗಿನಪ್ರದೇಶದಲ್ಲೂ ಶೋಧ ನಡೆಯುತ್ತಿದೆ.

ಹೆಲಿಕಾಪ್ಟರ್‌ನ ಅಂತಿಮ ಕ್ಷಣದ ಸ್ಥಿತಿಗತಿಗಳು ಮತ್ತು ಇತರ ಪ್ರಮುಖ ಮಾಹಿತಿಗಳನ್ನು ಬ್ಲಾಕ್‌ ಬಾಕ್ಸ್‌ ಒಳಗೊಂಡಿರುತ್ತದೆ.

ವಿಮಾನವೊಂದರ ಮಾಹಿತಿಯನ್ನು ಒಳಗೊಂಡಿರುವ ಈ ಪೆಟ್ಟಿಗೆಯನ್ನು ಬ್ಲ್ಯಾಕ್ ಬಾಕ್ಸ್ ಎಂದು ಕರೆಯಲಾಗುತ್ತಾದರೂ, ಹೊಳೆಯುವ ಕಿತ್ತಳೆ ಬಣ್ಣದ್ದಾಗಿರುತ್ತದೆ. ಕಾಕ್‌ಪಿಟ್ ಸಂಭಾಷಣೆಯನ್ನೂ ಇದು ಒಳಗೊಂಡಿರುತ್ತದೆ.

ಹೆಲಿಕಾಪ್ಟರ್‌ನ ಅವಶೇಷಗಳ ಹೆಚ್ಚಿನ ಫೋರೆನ್ಸಿಕ್ ಪರೀಕ್ಷೆಯು ಅಪಘಾತಕ್ಕೆ ಬಾಹ್ಯ ಕಾರಣಗಳಿವೆಯೇ ಎಂಬುದನ್ನು ಬಹಿರಂಗಪಡಿಸಲಿದೆ.

ಬ್ಲಾಕ್‌ ಬಾಕ್ಸ್‌ ಜೊತೆಗೇ, ಘಟನೆಯಲ್ಲಿ ಬದುಕುಳಿದಿರುವ ಕ್ಯಾಪ್ಟನ್ ವರುಣ್ ಸಿಂಗ್ ಅವರು ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡಬಲ್ಲರು. ಆದರೆ, ಅವರು ಶೇ 80ರಷ್ಟು ಸುಟ್ಟಗಾಯಗಳಿಂದಾಗಿ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್‌ ಪತನ ಗೊಂಡಿತು. ಈ ದುರಂತದಲ್ಲಿ, ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್ ರಾವತ್‌ (63), ಅವರ ಪತ್ನಿ ಮಧುಲಿಕಾ, 7 ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT