ಶುಕ್ರವಾರ, ಮೇ 27, 2022
21 °C

ತಾಜ್‌ ಮಹಲ್‌ ಶುದ್ಧೀಕರಿಸುವುದಾಗಿ ಹೇಳಿದ್ದ ಸ್ವಾಮೀಜಿಯನ್ನು ತಡೆದ ಪೊಲೀಸರು

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಆಗ್ರಾದ ತಾಜ್‌ಮಹಲ್‌ ಪ್ರವೇಶಿಸುತ್ತಿದ್ದ ಅಯೋಧ್ಯೆಯ ಜಗದ್ಗುರು ಪರಮಹಂಸ ದಾಸ್‌ ಸ್ವಾಮೀಜಿ ಅವರನ್ನು ಪೊಲೀಸರು ಮಂಗಳವಾರ ತಡೆದಿದ್ದಾರೆ.

ಅಕ್ಷಯ ತೃತೀಯ ದಿನದಂದು ಮಂತ್ರಗಳೊಂದಿಗೆ ತಾಜ್‌ ಮಹಲ್‌ ಅನ್ನು ಶುದ್ಧೀಕರಿಸುವುದಾಗಿ ಅವರು ಕೆಲ ದಿನಗಳ ಹಿಂದೆ ಘೋಷಿಸಿದ್ದರು.

ಈ ಹಿಂದೆ, ಏಪ್ರಿಲ್ 26 ರಂದು 'ಬ್ರಹ್ಮದಂಡ'ದೊಂದಿಗೆ ತಾಜ್‌ಮಹಲ್‌ ಆವರಣ ಪ್ರವೇಶಿಸಲು ಪ್ರಯತ್ನಿಸಿದ ಅವರನ್ನು ಪೊಲೀಸರು ತಡೆದಿದ್ದರು.

ತಮ್ಮನ್ನು ತಡೆದ ಪೊಲೀಸರ ಕ್ರಮಕ್ಕೆ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು. ಇತರ ಸಮುದಾಯದವರನ್ನು ಒಳಗೆ ಬಿಡುತ್ತಿರುವಾಗ ನನ್ನನ್ನು ಯಾಕೆ ಬಿಡುತ್ತಿಲ್ಲ. ನಾನು ಕೇಸರಿ ಬಟ್ಟೆ ಧರಿಸಿದ್ದರಿಂದ ತಡೆಯಲಾಗಿದೆ. ‘ನನ್ನನ್ನು ಅವಮಾನಿಸಿದ್ದಾರೆ. ಹಾಗಿದ್ದರೆ, ನನ್ನನ್ನು ಆಹ್ವಾನಿಸಿದ್ದು ಏಕೆ? ಎಂದು ಅವರು ಪ್ರಶ್ನೆ ಮಾಡಿದರು.

ಈ ಮಧ್ಯೆ, ತಾಜ್ ಮಹಲ್ ಒಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವವರೆಗೆ ಆಹಾರ ಮತ್ತು ನೀರನ್ನು ತ್ಯಜಿಸುವುದಾಗಿ ಸ್ವಾಮೀಜಿ ಘೋಷಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು