ಗುರುವಾರ , ಫೆಬ್ರವರಿ 25, 2021
28 °C
ಎಚ್‌ಎಎಲ್‌ ಎಂ.ಡಿ ಮಾಧವನ್‌ ಹೇಳಿಕೆ

‘ತೇಜಸ್‌’ ಖರೀದಿಗೆ ಹಲವು ದೇಶಗಳ ಒಲವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಅಭಿವೃದ್ಧಿಪಡಿಸಿ, ತಯಾರಿಸುವ ‘ತೇಜಸ್’ ಲಘು ಯುದ್ಧ ವಿಮಾನ (ಎಲ್‌ಸಿಎ) ಗಳ ಖರೀದಿಗೆ ಹಲವು ದೇಶಗಳು ಆಸಕ್ತಿ ವ್ಯಕ್ತಪಡಿಸಿವೆ ಎಂದು ಎಚ್‌ಎಎಲ್‌ನ ಚೇರಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ಭಾನುವಾರ ತಿಳಿಸಿದರು.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ನೀಡಿರುವ ಅವರು, ಮುಂದಿನ 2–3 ವರ್ಷಗಳಲ್ಲಿ ಈ ಯುದ್ಧವಿಮಾನಗಳ ಪೂರೈಕೆಗೆ ವಿವಿಧ ದೇಶಗಳಿಂದ ಆರ್ಡರ್‌ ಲಭಿಸುವ ಸಾಧ್ಯತೆ ಇದೆ  ಎಂದರು.

ವಾಯುಪಡೆಗೆ ₹ 48,000 ಕೋಟಿ ವೆಚ್ಚದಲ್ಲಿ ಒಟ್ಟು 83 ‘ತೇಜಸ್‌’ (ಮಾರ್ಕ್‌ 1ಎ) ಯುದ್ಧವಿಮಾನಗಳನ್ನು ಪೂರೈಸಲಾಗುವುದು. ಈ ಪೈಕಿ ಮೊದಲ ಹಂತದಲ್ಲಿ16 ಯುದ್ಧವಿಮಾನಗಳ ಪೂರೈಕೆ 2024ರ ಮಾರ್ಚ್‌ನಿಂದ ಆರಂಭಿಸಲಾಗುವುದು ಎಂದು ಹೇಳಿದರು.

‘ಎಚ್‌ಎಎಲ್‌ ನಿರ್ಮಿತ ತೇಜಸ್‌ನ ಕಾರ್ಯಕ್ಷಮತೆ ಚೀನಾದ ಯುದ್ಧವಿಮಾನ ಜೆಎಫ್‌–17ಗಿಂತ ಉತ್ತಮವಾಗಿದೆ. ಉತ್ಕೃಷ್ಟ ಎಂಜಿನ್‌, ಅತ್ಯಾಧುನಿಕ ರಾಡಾರ್‌ ವ್ಯವಸ್ಥೆ ಸೇರಿದಂತೆ ತಾಂತ್ರಿಕವಾಗಿ ಮುಂಚೂಣಿಯಲ್ಲಿರುವ ‘ತೇಜಸ್‌’ಗೆ ಚೀನಾದ ಯುದ್ಧವಿಮಾನಗಳು ಸರಿಸಾಟಿಯಾಗಲಾರವು’ ಎಂದು ಹೇಳಿದರು.

‘ಹಾರಾಟದ ಸಮಯದಲ್ಲಿಯೇ ಇಂಧನ ಮರುಪೂರಣ ವ್ಯವಸ್ಥೆಯನ್ನು ತೇಜಸ್‌ ಹೊಂದಿದೆ. ಇದು ನಮ್ಮ ಪ್ರತಿಸ್ಪರ್ಧಿ ಕಂಪನಿಗಳು ಉತ್ಪಾದಿಸುವ ಯುದ್ಧವಿಮಾನಗಳಲ್ಲಿ ಇಲ್ಲ’ ಎಂದೂ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು