Ram Temple | ಅಯೋಧ್ಯೆ ತಲುಪಿದ ನೇಪಾಳದ ಬೃಹತ್ ಸಾಲಿಗ್ರಾಮ ಶಿಲೆಗಳು

ಅಯೋಧ್ಯೆ: ನೇಪಾಳದಿಂದ ತರಿಸಲಾಗಿರುವ ಎರಡು ಸಾಲಿಗ್ರಾಮ ಶಿಲೆಗಳು ಇಲ್ಲಿನ ರಾಮ ಜನ್ಮಭೂಮಿ ಸ್ಥಳಕ್ಕೆ ತಲುಪಿವೆ.
ಸ್ಥಳೀಯರು ಹಾಗೂ ಅರ್ಚಕರು ಕಲ್ಲಿಗೆ ಪೂಜೆ ಸಲ್ಲಿಸಿ, ಹೂವಿನಿಂದ ಅಲಂಕಾರ ಮಾಡಿ ಸ್ವಾಗತಿಸಿದರು. ಬಳಿಕ ಅದನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಯ್ತು.
ಈ ಶಿಲೆಗಳಿಂದ ರಾಮ ಹಾಗೂ ಜಾನಕಿಯ ಮೂರ್ತಿಯನ್ನು ನಿರ್ಮಾಣ ಮಾಡಿ, ಅವುಗಳನ್ನು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡುವ ಸಾಧ್ಯತೆ ಇದೆ.
ಮೈಯಾಗ್ಡಿ ಹಾಗೂ ಮುಸ್ತಂಗ್ ಜಿಲ್ಲೆಯಲ್ಲಿ ಹರಿಯುವ ಕಾಳಿ ಗಂಡಕಿ ನದಿ ದಡದಲ್ಲಿ ಮಾತ್ರ ಈ ಶಿಲೆಗಳು ಲಭ್ಯವಿದ್ದು, ಇವುಗಳನ್ನು ಸೀತಾ ದೇವಿಯ ಜನ್ಮಸ್ಥಳವಾದ ನೇಪಾಳದ ಜಾನಕಪುರಿಂದ ಭಾರೀ ಟ್ರಕ್‌ಗಳ ಮೂಲಕ ತರಲಾಗಿದೆ.
ಬುಧವಾರ ಗೋರಖಪುರಕ್ಕೆ ಈ ಶಿಲೆಗಳು ತಲುಪಿದ್ದು, ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಒಂದು ಶಿಲೆ 18 ಟನ್ ಹಾಗೂ ಇನ್ನೊಂದು ಶಿಲೆ 16 ಟನ್ ತೂಕವಿದ್ದು, ಇವುಗಳಲ್ಲಿ ಮೂರ್ತಿ ತಯಾರಿಕೆ ಸಾಧ್ಯ ಎಂದು ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ಖಚಿತಪಡಿಸಿಕೊಳ್ಳಲಾಗಿದೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.