ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಬಹುಮತದ ಸಾಕ್ಷ್ಯ ಸಲ್ಲಿಸಿ: ಠಾಕ್ರೆ –ಶಿಂದೆಗೆ ಚುನಾವಣಾ ಆಯೋಗ ಸೂಚನೆ

ಅಕ್ಷರ ಗಾತ್ರ

ಮಹಾರಾಷ್ಟ್ರ: ಶಿವಸೇನಾ ಪಕ್ಷದಲ್ಲಿ ತಾವು ಹೊಂದಿರುವ ಸದಸ್ಯರ ಬಹುಮತ ಸಾಬೀತುಪಡಿಸುವ ಕುರಿತು ಆಗಸ್ಟ್‌ 8ರೊಳಗೆಸಾಕ್ಷ್ಯವನ್ನು ಸಲ್ಲಿಸುವಂತೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

ಪಕ್ಷದ ಚಿಹ್ನೆಯನ್ನು (ಬಿಲ್ಲು ಮತ್ತು ಬಾಣ) ತಮ್ಮ ಬಣಕ್ಕೆ ಹಂಚಿಕೆ ಮಾಡಬೇಕು ಎಂದು ಕೋರಿ ಚುನಾವಣಾ ಆಯೋಗಕ್ಕೆ ಶಿವಸೇನಾದ ಏಕನಾಥ ಶಿಂದೆ ಬಣವು ಮನವಿ ಮಾಡಿತ್ತು.

ಈ ಸಂಬಂಧ ಆಯೋಗಕ್ಕೆ ಶಿಂದೆ ಬಣ ಪತ್ರ ಬರೆದಿತ್ತು. ‘ತಮ್ಮ ಬಣವೇ ನಿಜವಾದ ಶಿವಸೇನಾ ಪಕ್ಷವಾಗಿದೆ. ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಹಾಗೂ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನರ್ವೇಕರ್‌ ಅವರು ತಮ್ಮ ಬಣಕ್ಕೆ ಮಾನ್ಯತೆ ನೀಡಿದ್ದಾರೆ’ ಎಂದು ಪತ್ರದಲ್ಲಿ ವಿವರಿಸಲಾಗಿತ್ತು.

ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿವೆ. ಹೀಗಾಗಿ, ಶಿಂದೆ ಬಣದ ಈ ಪತ್ರಕ್ಕೆ ಮಹತ್ವ ಬಂದಿದೆ.

ಪಕ್ಷದ 55 ಶಾಸಕರ ಪೈಕಿ ಕನಿಷ್ಠ 40 ಜನ ಶಾಸಕರು ಬಂಡಾಯ ನಾಯಕ ಶಿಂದೆ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜೂನ್‌ 30ರಂದು ಶಿಂದೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT