ಶನಿವಾರ, ಮಾರ್ಚ್ 25, 2023
28 °C

ರಾಜ್ಯಪಾಲ ಕೊಶ್ಯಾರಿಯವರನ್ನು ರಾಜ್ಯದಿಂದ ಹೊರಗೆ ಕಳಿಸಿ: ಶಿವಸೇನೆ ಶಾಸಕ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರು ‘ಹಳೇ ಕಾಲದ ಐಕಾನ್‌‘ ಎಂದು ಹೇಳಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ವಿರುದ್ಧ ಆಡಳಿತರೂಢ ಬಾಳಾಸಾಹೇಬಾಂಚಿ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.

‘ರಾಜ್ಯಪಾಲ ಕೊಶ್ಯಾರಿ ಅವರನ್ನು ರಾಜ್ಯದ ಹೊರಗೆ ಕಳುಹಿಸಿ‘ ಎಂದು ಬಾಳಾಸಾಹೇಬಾಂಚಿ ಶಿವಸೇನಾ (ಏಕನಾಥ ಶಿಂದೆ ಬಣ)ದ ಬುಲ್ದಾನ ಕ್ಷೇತ್ರದ ಶಾಸಕ ಸಂಜಯ್‌ ಗಾಯಕ್ವಾಡ್‌ ಹೇಳಿದ್ದಾರೆ.

’ಛತ್ರಪತಿ ಶಿವಾಜಿ ಮಹಾರಾಜರ ಚಿಂತನೆಗಳು ಯಾವತ್ತೂ ಹಳತಾಗುವುದಿಲ್ಲ ಎಂದು ರಾಜ್ಯಪಾಲರು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಪ್ರಪಂಚದ ಯಾವುದೇ ಗಣ್ಯ ವ್ಯಕ್ತಿಗಳಿಗೆ ಹೋಲಿಕೆ ಮಾಡಲಾಗದು. ರಾಜ್ಯದ ಇತಿಹಾಸ ಹಾಗೂ ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯದ ರಾಜ್ಯಪಾಲರನ್ನು ರಾಜ್ಯದಿಂದ ಬೇರೆ ಎಲ್ಲಾದರೂ ಹೊರಗೆ ಕಳುಹಿಸಬೇಕು ಎಂದು ನಾನು ಬಿಜೆಪಿ ನಾಯಕರನ್ನು ಹಾಗೂ ಕೇಂದ್ರ ಸರ್ಕಾರವನ್ನು ಕೋರುತ್ತೇನೆ‘ ಎಂದು ಗಾಯಕ್ವಾಡ್‌ ಹೇಳಿದ್ದಾರೆ.

ಶನಿವಾರ ಔರಂಗಾಬಾದ್‌ನಲ್ಲಿ ನಡೆದ, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹಾಗೂ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಗೌರವ ಡಿ.ಲಿಟ್‌ ಪದವಿ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲರು ಈ ರೀತಿ ಹೇಳಿದ್ದರು.

ಅವರ ಈ ಹೇಳಿಕೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು