ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಗ್ರಸ್ಥ ಮನಸ್ಸುಗಳು: ಟ್ರೋಲರ್‌ಗಳ ವಿರುದ್ಧ ತರೂರ್‌ ಕಿಡಿ

Last Updated 16 ನವೆಂಬರ್ 2022, 10:36 IST
ಅಕ್ಷರ ಗಾತ್ರ

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ತಮ್ಮೊಂದಿಗೆ ಸೆರೆಹಿಡಿದುಕೊಂಡಿದ್ದ ಛಾಯಾಚಿತ್ರವನ್ನು ಟ್ರೋಲ್‌ ಮಾಡಿದ್ದವರ ವಿರುದ್ಧ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬುಧವಾರ ಕಿಡಿಕಾರಿದ್ದಾರೆ. ಟ್ರೋಲರ್‌ಗಳನ್ನು ‘ರೋಗಗ್ರಸ್ಥ ಮನಸ್ಸುಗಳು’ ಎಂದು ಟೀಕಿಸಿದ್ದಾರೆ.

ಮಹಿಳೆಯೊಬ್ಬರು ತರೂರ್‌ ಜೊತೆಗಿನ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಅದನ್ನು ಹಲವರು ಟ್ರೋಲ್‌ ಮಾಡಿದ್ದರು. ಇದರಿಂದ ನೊಂದಿದ್ದ ಆಕೆ ಆ ಚಿತ್ರವನ್ನು ಟ್ವಿಟರ್‌ನಿಂದ ತೆಗೆದು ಹಾಕಿದ್ದರು.

‘ತರೂರ್‌ ಅವರೊಂದಿಗಿನ ನನ್ನ ಚಿತ್ರವನ್ನು ಬಲ ಪಂಥೀಯರು ದುರ್ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ’ ಎಂದು ಮಹಿಳೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಸಾಹಿತ್ಯ ಉತ್ಸವವೊಂದರಲ್ಲಿ ತರೂರ್‌ ಅವರನ್ನು ಭೇಟಿಯಾಗಿದ್ದೆ. ಪ‍್ರಸಿದ್ಧ ಲೇಖಕರಾಗಿರುವ ಅವರೊಂದಿಗೆ ನಾನು ಕೂಡ ಇತರರಂತೆ ಛಾಯಾಚಿತ್ರ ಸೆರೆಹಿಡಿದುಕೊಂಡಿದ್ದೆ. ಇದರ ಹಿಂದೆ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಕಾರಣಗಳಿಲ್ಲ’ ಎಂದೂ ಹೇಳಿದ್ದಾರೆ.

ಮಹಿಳೆಯ ಬರಹವನ್ನು ಮರು ಟ್ವೀಟ್‌ ಮಾಡಿರುವ ತರೂರ್‌, ‘ಕಾರ್ಯಕ್ರಮದಲ್ಲಿ ನನ್ನೊಂದಿಗೆ 50ಕ್ಕೂ ಹೆಚ್ಚು ಮಂದಿ ಫೋಟೊ ತೆಗೆಸಿಕೊಂಡಿದ್ದರು. ಅವರಲ್ಲಿ ಮಹಿಳೆ ಕೂಡ ಒಬ್ಬರು. ಆಕೆ ಹಂಚಿಕೊಂಡಿದ್ದ ಚಿತ್ರವನ್ನು ಬಳಸಿ ಇಲ್ಲ ಸಲ್ಲದ ಸಂಬಂಧ ಕಲ್ಪಿಸಲಾಗಿದೆ. ಆ ಮೂಲಕ ಆಕೆಯ ಮನಸ್ಸಿಗೆ ನೋವುಂಟು ಮಾಡಲಾಗಿದೆ. ನಿಮ್ಮ ರೋಗಗ್ರಸ್ಥ ಮನಸ್ಸನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ’ ಎಂದು ತರೂರ್‌ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT