ಅಮೇಠಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಠಿಯಲ್ಲಿ ಸ್ವಂತ ಮನೆ ನಿರ್ಮಾಣಕ್ಕಾಗಿ ಸೋಮವಾರ ಜಮೀನನ್ನು ಖರೀದಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಇರಾನಿ, ಇಲ್ಲಿನ ಯಾವುದೇ ಸಂಸದರು ಈ ಕ್ಷೇತ್ರವನ್ನು ತಮ್ಮ ಮನೆಯನ್ನಾಗಿ ಮಾಡಿಲ್ಲ ಎಂದು ದೂರಿದರು.

ಯಾವುದೇ ಅಮೇಠಿ ಸಂಸದರು ಇಲ್ಲಿ ಮನೆ ನಿರ್ಮಿಸಿ ವಾಸ ಮಾಡಿಲ್ಲ. ಇದು ಅಮೇಠಿ ಜನರ ಆಶ್ಚರ್ಯಕ್ಕೂ ಕಾರಣವಾಗಿದೆ ಎಂದು ರಾಹುಲ್ ಗಾಂಧಿ ಹೆಸರು ಉಲ್ಲೇಖಿಸದೆಯೇ ಆರೋಪ ಮಾಡಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಲ್ಲಿ ರಾಹುಲ್ ಗಾಂಧಿ ಸೋಲಿಸಿದ ಸ್ಮೃತಿ ಇರಾನಿ ಗೆಲುವು ದಾಖಲಿಸಿದ್ದರು.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾನು ಇಲ್ಲಿ ಮನೆ ನಿರ್ಮಿಸಿ ನನ್ನ ಎಲ್ಲ ಕೆಲಸಗಳನ್ನು ಇಲ್ಲಿಂದಲೇ ಮಾಡಲಿದ್ದೇನೆ ಎಂಬ ಭರವಸೆವನ್ನು ನೀಡಿದ್ದೆ. ಇದಕ್ಕಾಗಿ ಜಮೀನನ್ನು ಖರೀದಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ:ಮಾನಹಾನಿ ಪ್ರಕರಣ: ದಿಗ್ವಿಜಯ ಸಿಂಗ್ ವಿರುದ್ಧ ಜಾಮೀನು ರಹಿತ ವಾರಂಟ್

ಅಮೇಠಿಯ ಗೌರಿಗಂಜ್‌ನಲ್ಲಿ ₹12 ಲಕ್ಷ ನೀಡಿ ಸ್ಮೃತಿ ಇರಾನಿ ಜಮೀನು ಖರೀದಿಸಿದ್ದಾರೆ.

ನಾನು ಇಲ್ಲಿಯ ವರೆಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ಹೊಸ ಮನೆಯ ಭೂಮಿ ಪೂಜೆಯ ಸಂದರ್ಭದಲ್ಲಿ ಕ್ಷೇತ್ರದ ಎಲ್ಲ ಜನರನ್ನು ಆಹ್ವಾನಿಸುವುದಾಗಿ ತಿಳಿಸಿದರು.

ಇದುವರೆಗೆ ಅಮೇಠಿ ಜನರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಿದ್ದು, ವೈದ್ಯಕೀಯ ಕಾಲೇಜು ಹಾಗೂ ಸೇನಾ ಶಾಲೆಯನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದ್ದೇನೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.