ಮುಂಬೈ: ದೀರ್ಘ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಪುಷ್ಪಾ ಭಾವೆ (81) ಅವರು ಶುಕ್ರವಾರ ರಾತ್ರಿ ನಿಧನರಾದರು ಎಂದು ಅವರ ನಿಕಟ ಮೂಲಗಳು ತಿಳಿಸಿವೆ.

ಪುಷ್ಪಾ ಅವರಿಗೆ ಪತಿ ಆನಂದ್ ಭಾವೆ ಇದ್ದಾರೆ. ಪುಷ್ಪಾಭಾವೆ ಅವರದ್ದು ಬಹುಮುಖ ವ್ಯಕ್ತಿತ್ವ.ಅವರು ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಯಾಗಿದ್ದರು. ಸದಾ ಸಾಮಾನ್ಯ ನಾಗರಿಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು ಎಂದು ಪತ್ರಕರ್ತೆ,ಹೋರಾಟಗಾರ್ತಿ ಜತಿನಿ ದೇಸಾಯಿ ಸ್ಮರಿಸಿದ್ದಾರೆ.

ಸಂಯುಕ್ತ ಮಹಾರಾಷ್ಟ್ರ ಚಳವಳಿ ಮತ್ತು ಗೋವಾ ವಿಮೋಚನಾ ಆಂದೋಲನದಲ್ಲಿ ಪುಷ್ಪಾ ಭಾವೆ ಭಾಗವಹಿಸಿದ್ದರು.ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೃಣಾಲ್ ಗೋರೆಯಂತಹ ರಾಜಕೀಯ ಕಾರ್ಯಕರ್ತರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.