ಮಂಗಳವಾರ, ಜೂನ್ 22, 2021
28 °C

ಕೇಂದ್ರ ಸರ್ಕಾರದ ಸೂಚನೆ: ವಿವಿಧ ಪೋಸ್ಟ್‌ ಕೈಬಿಟ್ಟ ಜಾಲತಾಣಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಂತೆ ಟ್ವಿಟರ್‌ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗಿದ್ದ ಸುಮಾರು 100 ಪೋಸ್ಟ್‌ಗಳನ್ನು ಕೇಂದ್ರ ಸರ್ಕಾರದ ವಿನಂತಿ ಮೇರೆಗೆ ಆಯಾ ಜಾಲತಾಣ ವೇದಿಕೆಗಳಿಂದ ತೆಗೆಯಲಾಗಿದೆ.

ದೇಶದಲ್ಲಿ ಉದ್ಭವಿಸಿರುವ ವೈದ್ಯಕೀಯ ಬಿಕ್ಕಟ್ಟು ಅಥವಾ ನಕಲಿ ಸುದ್ದಿಗಳನ್ನು ತೆಗೆಯಲಾಗಿದೆ ಎಂದು ತಿಳಿಸಲಾಗಿದೆ. ‘ಹೀಗೇ ತೆಗೆಯಲಾದ ಪೋಸ್ಟ್‌ಗಳ ಬಗ್ಗೆ ಆಯಾ ಖಾತೆದಾರರಿಗೆ, ಕಾನೂನ ಪ್ರಕಾರ ಸರ್ಕಾರದ ಕೋರಿಕೆಯಂತೆ ಈ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ’ ಎಂದು ಟ್ವಿಟರ್ ತಿಳಿಸಿದೆ.

ಆದರೆ, ತೆಗೆಯಲಾಗಿರುವ ಪೋಸ್ಟ್‌ಗಳು ಯಾವುವು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸರ್ಕಾರದ ಮೂಲಗಳ ಪ್ರಕಾರ, ಕೇಂದ್ರ  ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಗೃಹ ಸಚಿವಾಲಯದ ಶಿಫಾರಸು ಆಧರಿಸಿ, ಜಾಲತಾಣಗಳ ಆಡಳಿತಗಳಿಗೆ ಪೋಸ್ಟ್‌ ಮತ್ತು ಯುಆರ್‌ಎಲ್‌ಗಳನ್ನು ತೆಗೆಯುವಂತೆ ಸೂಚಿಸಿತ್ತು.

ಕೆಲವು ಖಾತೆದಾರರು ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ತಪ್ಪು ಮಾಹಿತಿಯನ್ನು ಜನತೆಗೆ ರವಾನಿಸುತ್ತಿದ್ದರು ಇದು, ಸಮಾಜದಲ್ಲಿ ಗೊಂದಲ ಮೂಡಲು ಕಾರಣವಾಗಿತ್ತು. ಸಂಬಂಧವಿಲ್ಲದ, ಹಳೆಯದಾದ, ಸಂದರ್ಭಕ್ಕೆ ಸೂಕ್ತವಲ್ಲದ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೆ ಮಾಡಿಕೊಳ್ಳಲಾಗಿತ್ತು. ಇವು ಒಟ್ಟಾರೆ ಕೋವಿಡ್ ನಿರ್ವಹಣೆಯ ಶಿಷ್ಟಾಚಾರಕ್ಕೂ ವಿರುದ್ಧವಾಗಿತ್ತು ಎಂದು ಮೂಲಗಳು ವಿವರಿಸಿವೆ.

ಕೊರೊನಾ ನಿರ್ವಹಣೆ ಕುರಿತ ಟೀಕೆಯನ್ನು ಹೊಂದಿದ್ದ ಪೋಸ್ಟ್‌ಗಳು ಸೇರಿದಂತೆ ಸುಮಾರು 50 ಪೋಸ್ಟ್‌ಗಳನ್ನು ಟ್ವಿಟರ್‌ ತೆಗೆದುಹಾಕಿದೆ. ಸರ್ಕಾರದ ಆದೇಶದಂತೆ ಕಳೆದ ತಿಂಗಳು 500ಕ್ಕೂ ಅಧಿಕ ಖಾತೆಗಳನ್ನು ಅಮಾನತಿನಲ್ಲಿ ಇಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು