ಕಾಂಗ್ರೆಸ್‌ನಿಂದ ಡಿ.12ರಂದು ‘ಮೆಹಂಗಾಯಿ ಹಟಾವೋ’ ರ‍್ಯಾಲಿ: ಕೆ.ಸಿ ವೇಣುಗೋಪಾಲ್

ನವದೆಹಲಿ: ಕಾಂಗ್ರೆಸ್ ಪಕ್ಷವು ತೈಲ ಬೆಲೆ ಏರಿಕೆ ಮತ್ತು ಹಣದುಬ್ಬರದ ವಿರುದ್ಧ ಡಿಸೆಂಬರ್ 12ರಂದು ‘ಮೆಹಂಗಾಯಿ ಹಟಾವೋ’ ರ‍್ಯಾಲಿಯನ್ನು ಹಮ್ಮಿಕೊಂಡಿದೆ.
‘ದೇಶದ ಜನರ ಗಮನವನ್ನು ತೈಲ ಬೆಲೆ ಏರಿಕೆ ಮತ್ತು ಹಣದುಬ್ಬರದತ್ತ ಸೆಳೆಯುವ ನಿಟ್ಟಿನಲ್ಲಿ ಪಕ್ಷವು ಡಿಸೆಂಬರ್ 12ರಂದು ‘ಮೆಹಂಗಾಯಿ ಹಟಾವೋ’ ರ‍್ಯಾಲಿಯನ್ನು ನಡೆಸಲಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಮೋದಿ ಸರ್ಕಾರ ಲೂಟಿಯನ್ನು ನಿಲ್ಲಿಸಬೇಕು ಮತ್ತು ತೈಲ ದರವನ್ನು ಇಳಿಸಬೇಕು.ಅಲ್ಲಿಯವರೆಗೆ ನಾವು ಆಂದೋಲನ ಮುಂದುವರಿಸಲಿದ್ದೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಭಾರತದ ನಾಗರಿಕರು ಕ್ರೂರತನ ಮತ್ತು ಹೇಳಲಾಗದ ನೋವನ್ನು ಅನುಭವಿಸುತ್ತಿದ್ದಾರೆ. ದೈನಂದಿನ ಅಗತ್ಯ ವಸ್ತುಗಳನ್ನು ಪಡೆಯಲು ಜನರು ಕಷ್ಟಪಡುತ್ತಿದ್ದಾರೆ. ಇವೆಲ್ಲವನ್ನೂ ಮೋದಿ ಸರ್ಕಾರ ನಿರ್ಲಕ್ಷ್ಯಿಸುತ್ತಿದೆ. ಕೆಲವೊಂದು ಎಲೆಕ್ಟ್ರಾನಿಕ್ ಮಾಧ್ಯಮಗಳು ಇದನ್ನು ಬೆಂಬಲಿಸುತ್ತಿವೆ. ಅಲ್ಲದೆ, ಜನರ ದಿಕ್ಕು ತಪ್ಪಿಸಲು ಧಾರ್ಮಿಕ ಭಾವನೆಯನ್ನು ಮೋದಿ ಸರ್ಕಾರ ಬಳಸುತ್ತಿದೆ’ ಎಂದು ಅವರು ದೂರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.