ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಲ್ಲಿ ತೆಲುಗು ಮಹಿಳೆಗೆ ಅವಮಾನ: ಇಂಡಿಗೊ ವಿರುದ್ಧ ಕಿಡಿಕಾರಿದ ಸಚಿವ ಕೆಟಿಆರ್

Last Updated 19 ಸೆಪ್ಟೆಂಬರ್ 2022, 4:36 IST
ಅಕ್ಷರ ಗಾತ್ರ

ಹೈದರಾಬಾದ್‌:‘ಇಂಡಿಗೊ ವಿಮಾನ ಸಂಸ್ಥೆಯವರೇ ನೀವು ಸ್ಥಳೀಯ ಭಾಷೆಗಳು ಮತ್ತು ಪ್ರಯಾಣಿಕರನ್ನು ಗೌರವಿಸಬೇಕು‘ ಎಂದು ತೆಲಂಗಾಣ ಸಚಿವಕೆ.ಟಿ.ರಾಮರಾವ್‌(ಕೆ.ಟಿ.ಆರ್‌) ಹೇಳಿದ್ದಾರೆ.

ಇಂಡಿಗೊ ವಿಮಾನದಲ್ಲಿ ತೆಲುಗು ಮಾತನಾಡುವ ತೆಲಂಗಾಣಮಹಿಳೆಯನ್ನುಇಂಗ್ಲಿಷ್ ಮತ್ತು ಹಿಂದಿ ಭಾಷೆ ಗೊತ್ತಿಲ್ಲದ ಕಾರಣ ಆಕೆಯನ್ನು ಅವಮಾನಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡಿದ ಹಿನ್ನೆಲೆಯಲ್ಲಿ ಸಚಿವ ಕೆ.ಟಿ.ಆರ್‌ ಟ್ವೀಟ್‌ ಮೂಲಕ ಇಂಡಿಗೊ ಸಂಸ್ಥೆಗೆ ಸ್ಥಳೀಯ ಭಾಷೆಗಳನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

ಐಐಎಂ ಅಹಮದಾಬಾದ್‌ನ ಸಹಾಯಕ ಪ್ರಾಧ್ಯಾಪಕಿ ದೇವಸ್ಮಿತಾ ಚಕ್ರವರ್ತಿ ಅವರು, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆ ಗೊತ್ತಿಲ್ಲದ ಕಾರಣಕ್ಕೆ ಸಿಬ್ಬಂದಿಆಕೆಯ ಸೀಟಿನ ಬದಲು ಬೇರೆ ಸೀಟಿಗೆ ಸ್ಥಳಾಂತರ ಮಾಡಿದ ಘಟನೆಯನ್ನುಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

ಈ ಘಟನೆಯನ್ನು ಖಂಡಿಸಿ ನೆಟ್ಟಿಗರು ಇಂಡಿಗೊ ವಿಮಾನಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವರು ಸಿಬ್ಬಂದಿವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಸೆಪ್ಟೆಂಬರ್‌ 16ರಂದು ಇಂಡಿಗೂ ವಿಮಾನ (6ಇ–7279) ವಿಜಯವಾಡದಿಂದ ಹೈದರಾಬಾದ್‌ಗೆ ಹೋಗುತ್ತಿತ್ತು. 2ಎ ಸೀಟಿನಲ್ಲಿ ಕುಳಿತಿದ್ದ ಮಹಿಳೆಯನ್ನು ಸಿಬ್ಬಂದಿಗಳು ಬಲವಂತವಾಗಿ 3ಸಿ ಸೀಟಿಗೆ ಸ್ಥಳಾಂತರ ಮಾಡಿದ್ದರು. ಆ ಮಹಿಳೆಗೆ ಇಂಗ್ಲಿಷ್‌ ಹಾಗೂ ಹಿಂದಿ ಅರ್ಥವಾಗುತ್ತಿರಲಿಲ್ಲ. ಅವರು ತೆಲುಗು ಮಾತ್ರ ಮಾತನಾಡುತ್ತಿದ್ದರು. ಆ ಮಹಿಳೆ ಸಿಬ್ಬಂದಿ ಹೇಳಿದಂತೆಯೇ ಕೇಳಿ ತಮ್ಮ ಸೀಟು ಬಿಟ್ಟುಕೊಟ್ಟು ಬೇರೆ ಸ್ಥಳಕ್ಕೆ ಬಂದರು ಎಂದು ದೇವಸ್ಮಿತಾ ಬರೆದುಕೊಂಡಿದ್ದಾರೆ.

ವಿಮಾನ ಸಿಬ್ಬಂದಿ ಭ್ರದ್ರತೆ ಕಾರಣಕ್ಕೆ ಆಕೆಯನ್ನು ಬೇರೆ ಸೀಟಿಗೆ ಸ್ಥಳಾಂತರ ಮಾಡಿದರು. ಆದರೆ ಅವರು ಭದ್ರತೆ ಕಾರಣ ಹೇಳಿದ್ದು ನೆಪಕ್ಕೆ ಮಾತ್ರ. ಹಿಂದಿ, ಇಂಗ್ಲಿಷ್‌ ತಿಳಿಯದಿರುವುದಕ್ಕೆ ಆ ಮಹಿಳೆಯ ಮೇಲೆ ಭಾಷಾ ತಾರತಮ್ಯ ಮಾಡಿ ಸ್ಥಳ ಬದಲಾವಣೆ ಮಾಡಿದರು ಎಂದು ದೇವಸ್ಮಿತಾ ಆರೋಪಿಸಿದ್ದಾರೆ

ಇಂಡಿಗೊ ಸಿಬ್ಬಂದಿಗಳ ನಡೆಯನ್ನು ಖಂಡಿಸಿ ಕೆ.ಟಿ.ಆರ್‌ ಟ್ವೀಟ್‌ ಮಾಡಿದ್ದಾರೆ. ‘ಇಂಡಿಗೊ ಸಂಸ್ಥೆಯವರೇ, ನೀವು ಸ್ಥಳೀಯ ಭಾಷೆಗಳನ್ನು ಮತ್ತು ಪ್ರಯಾಣಿಕರಗೌರವಿಸುವುದನ್ನು ಮೊದಲು ಪ್ರಾರಂಭಿಸಿ ಎಂದು ಮನವಿ ಮಾಡುತ್ತೇನೆ. ಪ್ರಾದೇಶಿಕ ಮಾರ್ಗಗಳಲ್ಲಿ ಕನ್ನಡ, ತಮಿಳು, ತೆಲುಗು ಮುಂತಾದ ಸ್ಥಳೀಯ ಭಾಷೆಗಳನ್ನು ಮಾತನಾಡುವ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಿ‘ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಘಟನೆ ಖಂಡಿಸಿ ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದುವರೆಗೂ ಇಂಡಿಗೊ ಸಂಸ್ಥೆ ಈ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT