ಬುಧವಾರ, ಜೂನ್ 23, 2021
30 °C
ಇಂದು ಕಾರ್ಯಾಚರಣೆ ಪೂರ್ಣಗೊಳ್ಳುವ ವಿಶ್ವಾಸ: ಹಡಗಿನ ಮಾಲೀಕರು

‌ಸುಯೆಜ್‌ ಕಾಲುವೆಯಲ್ಲಿ ಸಿಲುಕಿರುವ ಹಡಗು ತೆರವಿನ ಪ್ರಯತ್ನ ಮುಂದುವರಿಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸುಯೆಜ್‌/ಕೈರೊ(ಎಪಿ/ಎಎಫ್‌ಪಿ): ಸುಯೆಜ್‌ ಕಾಲುವೆಯಲ್ಲಿ ಎವರ್‌ ಗಿವನ್‌ ಬೃಹತ್ ಗಾತ್ರದ ಹಡಗು ಸಿಲುಕಿಕೊಂಡು ಐದು ದಿನಗಳಾಗಿದ್ದು, ಅದನ್ನು ತೆರವುಗೊಳಿಸಲು ತಜ್ಞರು ವಿವಿಧ ರೀತಿಯ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಕಾಲುವೆಗೆ ಅಡ್ಡವಾಗಿ ಸಿಕ್ಕಿಕೊಂಡಿರುವ ಹಡಗನ್ನು ತೆರವುಗೊಳಿಸಲು ಶುಕ್ರವಾರ ಕೈಗೊಂಡ ಪ್ರಯತ್ನಗಳು ಫಲ ನೀಡಲಿಲ್ಲ ಎಂದು ತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಎರಡೂ ದಿಕ್ಕುಗಳ ಜಲಮಾರ್ಗವನ್ನು ಬಂದ್‌ ಮಾಡಿರುವ ಹಡಗನ್ನು ಶನಿವಾರದೊಳಗೆ ತೆರವುಗೊಳಿಸಲಾಗುತ್ತದೆ ಎಂದು ಹಡಗಿನ ಮಾಲೀಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಷ್ಯಾ ಮತ್ತು ಯೂರೋಪ್‌ ನಡುವೆ ಸರಕು ಸಾಗಿಸುವ ನಾಲ್ಕು ಫುಟ್ಬಾಲ್ ಮೈದಾನಗಳಿಗಿಂತಲೂ ಉದ್ದವಾದ ಎಂ.ವಿ ಎವರ್ ಗಿವನ್‌ ಹಡಗು ಮಂಗಳವಾರ ಆಫ್ರಿಕಾ ಮತ್ತು ಸಿನಾಯ್ ಪರ್ಯಾಯ ದ್ವೀಪಗಳ ನಡವಿರುವ ಕಿರಿದಾದ ಸುಯೆಜ್ ಕಾಲುವೆಯಲ್ಲಿ ಕೆಟ್ಟು ನಿಂತಿದೆ.  ಈ ಬೃಹತ್ ಹಡಗು ಸುಯೆಜ್‌ ನಗರದ ಸಮೀಪವಿರುವ ದಕ್ಷಿಣ ದ್ವಾರದಿಂದ ಉತ್ತರಕ್ಕೆ ಆರು ಕಿಲೋಮೀಟರ್ (3.7 ಮೈಲಿ) ದೂರದಲ್ಲಿರುವ ಕಾಲುವೆಯ ಏಕ ಪಥದಲ್ಲಿ ಸಿಲುಕಿಕೊಂಡಿದೆ.

ಈ ಕಾಲುವೆಯಲ್ಲಿ ಸಿಕ್ಕಿಕೊಂಡ ನಂತರ, ಈ ಜಲಮಾರ್ಗದಲ್ಲಿ ಸಂಚರಿಸುವ ಹಡಗುಗಗಳು ತಮ್ಮ ಮಾರ್ಗ ಬದಲಿಸಿಕೊಂಡು, ಆಫ್ರಿಕಾದ ಮೂಲಕ ಸಾಗುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು