ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆ: ಮಾಹಿತಿ ಹಂಚಿಕೊಳ್ಳಲು ‘ಸುಪ್ರೀಂ’ ನಿರಾಕರಣೆ

ಸುಪ್ರೀಂಕೋರ್ಟ್‌ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಪರಿಗಣಿಸುವ ವಿಚಾರ
Last Updated 24 ಜುಲೈ 2021, 16:06 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂಕೋರ್ಟ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಕೀಲ ರನ್ನು ವಿವಿಧ ಹೈಕೋರ್ಟ್‌ಗಳ ನ್ಯಾಯ ಮೂರ್ತಿ ಹುದ್ದೆಗೆ ಪರಿಗಣಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಬರೆದಿದೆ ಎನ್ನಲಾದ ಪತ್ರದ ಬಗ್ಗೆ ಉತ್ತರಿಸಲುಸುಪ್ರೀಂ ಕೋರ್ಟ್ ನಿರಾಕರಿಸಿದೆ.ಆರ್‌ಟಿಐ ಮೂಲಕ ಪಡೆದಿರುವ ಮಾಹಿತಿಗೆ ಪ್ರತಿಕ್ರಿಯೆ ನೀಡಲು ಕೋರ್ಟ್ ಒಪ್ಪಿಲ್ಲ.

ವಿಶ್ವಾಸದಲ್ಲಿ ನೀಡಲಾದ ಮಾಹಿತಿ ಮತ್ತು ಮೂರನೇ ವ್ಯಕ್ತಿಯ ಮಾಹಿತಿ ಆಗಿರುವುದರಿಂದ ಪಾರದರ್ಶಕತೆ ಕಾನೂನಿನ ಅಡಿಯಲ್ಲಿ ಅದಕ್ಕೆ ವಿನಾಯಿತಿ ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) (ಇ) ಮತ್ತು 11 (1) ಅಡಿ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ನ್ಯಾಯಮೂರ್ತಿಗಳ ನೇಮಕ ಕುರಿತಂತೆ ಪತ್ರ ಬರೆಯಲಾಗಿದೆ ಎಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಬಹಿರಂಗವಾಗಿ ಹೇಳಿಕೊಂಡ ನಂತರ, ವಕೀಲ ರಾದಅಮೃತಪಾಲ್ ಸಿಂಗ್ ಖಾಲ್ಸಾ ಎಂಬುವರು ಮಾಹಿತಿ ಕೋರಿ, ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

ಮೇ 31ರಂದು ಬಾರ್ ಅಸೋಸಿಯೇಷನ್ ಕಳುಹಿಸಿದ ಪ್ರಸ್ತಾವನೆಯ ಪ್ರತಿ, ಆದೇಶ, ಪತ್ರ ಸಂವಹನ ಅಥವಾ ಇನ್ನಾವುದೇ ದಾಖ ಲೆಗಳನ್ನು ಒದಗಿಸುವಂತೆ ಖಾಲ್ಸಾ ತಮ್ಮ ಅರ್ಜಿಯಲ್ಲಿ ಕೋರಿದ್ದರು. ಈ ಕುರಿತು ಬರೆಯಲಾದ ಟಿಪ್ಪಣಿ
ಗಳನ್ನೂ ಕೇಳಿದ್ದರು.

ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ವೃತ್ತಿ ಮಾಡುತ್ತಿರುವ ವಕೀಲರನ್ನು ಹೈಕೋರ್ಟ್ ನ್ಯಾಯಾ ಧೀಶರ ಹುದ್ದೆಗೆ ಪರಿಗಣಿಸಲು, ಮುಖ್ಯನ್ಯಾಯಮೂರ್ತಿಗಳು ಎಲ್ಲ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ನೀಡಿದ್ದಾರೆ ಎನ್ನಲಾದ ಪತ್ರ ಅಥವಾ ಆದೇಶದ ಪ್ರತಿ ಒದಗಿಸು ವಂತೆ ಕೋರಿದ್ದರು.

ವಿಶೇಷವೆಂದರೆ, ಅರ್ಹ ವಕೀಲರನ್ನು ಗುರುತಿಸಲು ಬಾರ್ ಅಸೋಸಿಯೇಷನ್ಕಳೆದ ತಿಂಗಳು ಶೋಧನಾ ಸಮಿತಿ ರಚಿಸಿತ್ತು.

ನ್ಯಾಯಮೂರ್ತಿ ಹುದ್ದೆಗೆ ಏರಬಲ್ಲ ವಕೀಲರನ್ನು ಗುರುತಿಸುವಂತೆ ಮುಖ್ಯನ್ಯಾಯಮೂರ್ತಿಗಳು ಹೈಕೋರ್ಟ್‌ಗಳಿಗೆ ಸೂಚನೆ ನೀಡಿದ್ದಾರೆ ಎಂಬುದಾಗಿ ವಿಕಾಸ್ ಸಿಂಗ್ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT