ಬುಧವಾರ, ಅಕ್ಟೋಬರ್ 28, 2020
23 °C

ನಟ ಸುಶಾಂತ್‌ ಸಾವಿನ ತನಿಖೆ ದಿಕ್ಕು ತಪ್ಪಿಲ್ಲ: ಸಿಬಿಐ ಸ್ಪಷ್ಟನೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆ ಇನ್ನೂ ಮುಂದುವರೆದದ್ದು, ಎಲ್ಲಾ ದಿಕ್ಕುಗಳಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ತಿಳಿಸಿದೆ.

ಸುಶಾಂತ್‌ ಸಾವಿನ ಬಗ್ಗೆ ಸಿಬಿಐ ನಡೆಸುತ್ತಿರುವ ತನಿಖೆಯು ನಿಜಾಂಶಗಳನ್ನು ಬಿಟ್ಟು ಬೇರೆಯದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಟನ ಕುಟುಂಬದ ವಕೀಲರು ಆರೋಪಿಸಿದ್ದರು. 

'ಸುಶಾಂತ್‌ ಪ್ರಕರಣದ ಗಮನವನ್ನು ಡ್ರಗ್ಸ್ ಪ್ರಕರಣದ ಕಡೆಗೆ ತಿರುಗಿಸಲಾಗುತ್ತಿದೆ. ಇಂದು ಪ್ರಕರಣವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಮಗೆ ತಿಳಿದಿಲ್ಲವಾದ್ದರಿಂದ ನಾವು ಅಸಹಾಯಕರಾಗಿದ್ದೇವೆ. ಇಂದಿನವರೆಗೂ ಸಿಬಿಐ ತನಿಖೆಯಲ್ಲಿ ಯಾವ ಸತ್ಯಾಂಶಗಳು ಕಂಡುಬಂದಿವೆ ಎಂಬುದರ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಾಗಿಲ್ಲ' ಎಂದು ವಕೀಲ ವಿಕಾಸ್‌ ಸಿಂಗ್‌ ಆಪಾದಿಸಿದ್ದರು. 

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಬಿಐ, 'ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ವೃತ್ತಿಪರ ತನಿಖೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ ಎಲ್ಲಾ ಅಂಶಗಳನ್ನು ತೀಷ್ಣವಾಗಿ ಗಮನಿಸಲಾಗುತ್ತಿದೆ. ಮತ್ತು, ಯಾವುದೇ ಅಂಶವನ್ನು ಇಲ್ಲಿಯವರೆಗೆ ತಳ್ಳಿಹಾಕಿಲ್ಲ' ಎಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು