ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ಆರ್‌ಜೆಡಿ–ಜೆಡಿಯು ಮೈತ್ರಿ ಶೀಘ್ರದಲ್ಲೇ ಮುರಿಯುತ್ತೇವೆ: ಸುಶೀಲ್ ಮೋದಿ

Last Updated 3 ಸೆಪ್ಟೆಂಬರ್ 2022, 10:09 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದಲ್ಲಿ ಆರ್‌ಜೆಡಿ–ಜೆಡಿ(ಯು) ಮೈತ್ರಿಯನ್ನು ಬಿಜೆಪಿ ಶೀಘ್ರದಲ್ಲೇ ಮುರಿಯಲಿದೆ ಎಂದು ಆ ಪಕ್ಷದ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

‘ಮಣಿಪುರದಲ್ಲಿ ಐವರು ಜೆಡಿ(ಯು) ಶಾಸಕರು ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಮಣಿಪುರ ಜೆಡಿ(ಯು) ಮುಕ್ತವಾಗಿದೆ. ಆ ಶಾಸಕರೆಲ್ಲ ಎನ್‌ಡಿಎ ಭಾಗವಾಗಿ ಉಳಿಯಲು ಬಯಸಿದ್ದಾರೆ. ಬಿಹಾರದ ಜೆಡಿ(ಯು)–ಆರ್‌ಜೆಡಿ ಮೈತ್ರಿಕೂಟವನ್ನೂ ನಾವು ಶೀಘ್ರದಲ್ಲೇ ಮುರಿಯಲಿದ್ದೇವೆ. ಬಿಹಾರವನ್ನೂ ಜೆಡಿ(ಯು) ಮುಕ್ತ ಮಾಡಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಮಣಿಪುರದ ಐವರು ಜೆಡಿ(ಯು) ಶಾಸಕರು ಶುಕ್ರವಾರ ಬಿಜೆಪಿ ಜತೆ ಸೇರಿದ್ದರು. ಇದರೊಂದಿಗೆ ಆ ರಾಜ್ಯದಲ್ಲಿ ಬಿಜೆಪಿ ಜತೆ ಜೆಡಿ(ಯು) ವಿಲೀನಗೊಂಡಂತಾಗಿತ್ತು. ಇದರ ಬೆನ್ನಲ್ಲೇ ಸುಶೀಲ್ ಕುಮಾರ್ ಮೋದಿ ಹೇಳಿಕೆ ನೀಡಿರುವುದಾಗಿ ‘ಎಎನ್‌ಐ’ ವರದಿ ಮಾಡಿದೆ.

ಹೋರ್ಡಿಂಗ್‌ಗಳು ಮತ್ತು ಪೋಸ್ಟರ್‌ಗಳನ್ನು ಅಳವಡಿಸುವ ಮೂಲಕ ಯಾರೂ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಂಡಿದ್ದ ಜೆಡಿ(ಯು) ಇತ್ತೀಚೆಗೆ ಆರ್‌ಜೆಡಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಜತೆಗೂಡಿ ಸರ್ಕಾರ ರಚಿಸಿದೆ. ನಂತರ ಜೆಡಿ(ಯು) ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT