ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಎನ್‌ಸಿಪಿ ಮುಖಂಡ ಅಜಿತ್ ಪವಾರ್?

Last Updated 18 ಏಪ್ರಿಲ್ 2023, 2:56 IST
ಅಕ್ಷರ ಗಾತ್ರ

ಮುಂಬೈ: ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಹಿರಿಯ ಮುಖಂಡ ಅಜಿತ್ ಪವಾರ್ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎನ್ನಲಾಗಿದ್ದು, ಅವರ ರಾಜಕೀಯ ನಡೆ ಮಹಾರಾಷ್ಟ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅವರು ಸೋಮವಾರ ಪುಣೆಯಲ್ಲಿ ನಡೆಯಬೇಕಿದ್ದ ಪೂರ್ವನಿಗದಿತ ಸಭೆ ರದ್ದುಪಡಿಸಿದ್ದರು. ಇದರ ಬಳಿಕವೇ ಅವರು ಶರದ್ ಪವಾರ್ ನೇತೃತ್ವದ ಪಕ್ಷದ ಶಾಸಕರ ಸಭೆ ಕರೆದಿದ್ದಾರೆ ಎಂಬ ಮಾತು ಕೇಳಿಬಂದಿದ್ದವು.

ಆದರೆ, ಸಭೆ ಕರೆಯಲಾಗಿದೆ ಎಂಬುದನ್ನು ಸ್ವತಃ ಅಜಿತ್ ಪವಾರ್ ಸಂಜೆ ನಿರಾಕರಿಸಿದರು. 63 ವರ್ಷದ ಅವರು ಈಗ ವಿಧಾನಸಭೆ ವಿರೋಧಪಕ್ಷದ ನಾಯಕರಾಗಿದ್ದಾರೆ. ಅವರು ನಾಲ್ಕು ಬಾರಿ ಉಪ ಮುಖ್ಯಮಂತ್ರಿ ಆಗಿದ್ದರು.

ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂಬ ವರದಿ ಸೋಮವಾರ ವ್ಯಾಪಕವಾಗಿತ್ತು. ‘ನಾನು ನವೀ ಮುಂಬೈನ ಎಂಜಿಎಂ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಎನ್‌ಸಿಪಿ ಶಾಸಕರ ಸಭೆ ಕರೆದಿದ್ದೇನೆ ಎಂಬುದು ಸಂಪೂರ್ಣವಾಗಿ ಸತ್ಯಕ್ಕೆ ವಿರುದ್ಧವಾದುದು’ ಎಂದು ಸಂಜೆ ಈ ಸಂಬಂಧ ಪ್ರತಿಕ್ರಿಯಿಸಿದರು.

ಶರದ್‌ ಪವರ್ ಅವರ ಪುತ್ರಿ, ಸಂಸದೆ ಸುಪ್ರಿಯಾ ಸುಳೆ, ‘ಮಾಧ್ಯಮಗಳು ಬೇಗನೇ ನಿರ್ಧಾರಕ್ಕೆ ಬರುತ್ತವೆ. ಕೆಲ ಕಾರ್ಯಕ್ರಮಗಳು ರದ್ದಾದರೆ ಅದರರ್ಥ ಏನೋ ಆಗುತ್ತಿದೆ ಎಂದಲ್ಲ’ ಎಂದು ಪ್ರತಿಕ್ರಿಯಿಸಿದರು.

ಮಹಾವಿಕಾಸ ಆಘಾಡಿ (ಎಂವಿಎ) ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಾಜ್ಯಸಭೆ ಸದಸ್ಯ ಸಂಜಯ್ ರಾವುತ್, ‘ಅಜಿತ್ ಪವಾರ್ ಎನ್‌ಸಿಪಿ ತೊರೆಯುತ್ತಾರೆ ಎಂದು ನಾನು ನಂಬುವುದಿಲ್ಲ’ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಭವನ್‌ಕುಳೆ ಮತ್ತು ಮುಂಬೈ ಘಟಕದ ಅಧ್ಯಕ್ಷ ಆಶೀಶ್‌ ಶೆಲ್ಲರ್ ಅವರು ಸೋಮವಾರ ನವದೆಹಲಿಗೆ ಭೇಟಿ ನೀಡಿದ್ದು, ಅದರ ವಿವರ ಇನ್ನೂ ಬರಬೇಕಿದೆ.

‘ರಾಜಕೀಯ ಬೆಳವಣಿಗೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಮುಂದಿನ ಒಂದು ತಿಂಗಳಲ್ಲಿ ಹಲವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ‘ ಎಂದು ಚಂದ್ರಶೇಖರ ಭವನ್‌ಕುಳೆ ಸುದ್ದಿಗಾರರಿಗೆ ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT